×
Ad

ಮಂಗಳೂರಿನಲ್ಲಿ ಜಿಐಎಸ್ ಆಧಾರಿತ ಒಳಚರಂಡಿ ಮ್ಯಾಪಿಂಗ್ ಯೋಜನೆ

Update: 2025-11-27 23:21 IST

ಮಂಗಳೂರು: ಮಂಗಳೂರಿನಲ್ಲಿ ಜಿಐಎಸ್ ಆಧಾರಿತ ಒಳಚರಂಡಿ ಮ್ಯಾಪಿಂಗ್ ಯೋಜನೆ ನಡೆಯುತ್ತಿದ್ದು, ವಾರ್ಡ್ 37, 38 ಮತ್ತು 40ರಲ್ಲಿ 933ಕ್ಕೂ ಹೆಚ್ಚು ಮ್ಯಾನ್ ಹೋಲ್‌ಗಳನ್ನು ಮ್ಯಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ಅಂತಿಮ ವರ್ಷದ ಶ್ರೇಷ್ಠಿ, ಅವ್ಯಯ ಶರ್ಮಾ ಪಿ, ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ವಾಸವಿ ನಾಗರಾಜ್ ಜೋಶಿ ಹಾಗೂ ಮಂಗಳೂರಿನ ಕೆಲವು ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ಯೋಜನೆಗೆ ಸಾಥ್ ನೀಡಿದ್ದಾರೆ.

ಮಂಗಳೂರಿನ ಅಂಡರ್‌ಗ್ರೌಂಡ್ ಒಳಚರಂಡಿ ಜಾಲದ ನಿರ್ವಹಣೆಯನ್ನು ಪರಿವರ್ತಿಸುವ ಗುರಿಯನ್ನು ಹೊಂದಿರುವ ಮಹತ್ವಾಕಾಂಕ್ಷೆಯ ಜಿಐಎಸ್ ಆಧಾರಿತ ಮ್ಯಾಪಿಂಗ್ ಉಪಕ್ರಮಕ್ಕೆ ವಿದ್ಯಾರ್ಥಿಗಳು ಕೊಡುಗೆ ನೀಡುತ್ತಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಎಇಇ ಎಂ.ಎನ್.ಶಿವಲಿಂಗಪ್ಪ ಮತ್ತು ಯೋಜನಾ ವ್ಯವಸ್ಥಾಪಕಿ ಅನನ್ಯಾ ಎ.ಬಂಗೇರ ಅವರ ಮಾರ್ಗದರ್ಶನದಲ್ಲಿ ಡಿಜಿಟಲ್ ಕಾರ್ಟೊಗ್ರಫಿ (ಡಿಸಿ) ಯೋಜನೆ ನಡೆಯುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News