×
Ad

ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಮುತುವರ್ಜಿ ವಹಿಸಬೇಕು: ಸ್ಪೀಕರ್‌ ಯುಟಿ ಖಾದರ್

Update: 2023-09-29 22:32 IST

ಉಳ್ಳಾಲ: ಪ್ರವಾದಿ ಮುಹಮ್ಮದ್ ಪೈಗಂಬರ್ ರವರು ಶಾಂತಿ ಸೌಹಾರ್ದತೆಗೆ ಕರೆ ನೀಡಿದವರು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಶಾಂತಿಯ ನೆಲೆಯನ್ನು ನಾವು ನಿರ್ಮಿಸಬೇಕು. ಟೀಕೆ ಟಿಪ್ಪಣಿಗಳು ಹಲವು ಬರಬಹುದು.ಅದಕ್ಕೆ ಪ್ರತಿರೋಧ ತೋರದೆ ಶಾಂತಿ ಸೌಹಾರ್ದತೆಗೆ ಒತ್ತು ಕೊಡೋಣ. ನಮ್ಮ ಆಸ್ತಿಗಳಾದ ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ನಾವು ಮುತುವರ್ಜಿ ವಹಿಸಬೇಕು. ಎಲ್ಲದಕ್ಕೂ ನನ್ನಿಂದ ಸಂಪೂರ್ಣ ಸಹಕಾರವಿದೆ ಎಂದು ವಿಧಾನ ಸಭಾ ಸಭಾಪತಿ ಯು ಟಿ ಖಾದರ್ ಅಭಿಪ್ರಾಯ ಪಟ್ಟರು.

ಅವರು ಇಲ್ಯಾಸ್ ಜುಮಾ ಮಸೀದಿ ಹಾಗೂ ರಿಫಾಯಿಯ್ಯ ಮದ್ರಸ ಹಮ್ಮಿಕೊಂಡ ಮೀಲಾದ್ ಕಾರ್ಯಕ್ರಮದ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮ ದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಜಮಾಅತ್ ಸಮಿತಿ ವತಿಯಿಂದ ಸ್ಪೀಕರ್ ಯುಟಿ ಖಾದರ್ ಅವರಿಗೆ ಸನ್ಮಾನಿಸಲಾಯಿತು. ಖತೀಬ್ ಇಸ್ಹಾಖ್ ಸಖಾಫಿ ದುಆ ನೆರವೇರಿಸಿದರು. ಪ್ರಧಾನ ಕಾರ್ಯದರ್ಶಿ ಮೋನು ಕಲ್ಕಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಿಲಾದ್ ಪ್ರಯುಕ್ತ ಮದ್ರಸ ವಿದ್ಯಾರ್ಥಿಗಳ ಜಾಥಾ , ಮೌಲೂದು ಪಾರಾಯಣ, ವಿದ್ಯಾರ್ಥಿಗಳ ಪ್ರತಿಭೋತ್ಸವ ಕಾರ್ಯಕ್ರಮ ನಡೆಯಿತು. ಸದ್ ರ್ ಮುಅಲ್ಲಿಂ ಶರೀಫ್ ಸಅದಿ ಕಾರ್ಯಕ್ರಮ ನಿರೂಪಿಸಿದರು.

ಮಸೀದಿ ಉಪಾಧ್ಯಕ್ಷ ಅಶ್ರಫ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಮುಅಲ್ಲಿಂ ಹಸನ್ ಸ ಅದಿ, ರಝಾಕ್ ಸ ಅದಿ, ಇಸ್ಹಾಕ್ ಸ ಅದಿ, ಮಸೀದಿ ಸಮಿತಿ ಸದಸ್ಯ ರಾದ ನಾಸಿರ್ ಹಾಜಿ ದೇರಳಕಟ್ಟೆ, ಮುಹಮ್ಮದ್ ಮಾಸ್ಟರ್, ಹಸೈನಾರ್ ತಟ್ಲ,ಕಂಡಿಕ್ಕ ಮಹ್ಮೂದ್ ಹಾಜಿ, ಬಶೀರ್ ನಾಟೆಕಲ್, ರಝಾಕ್ ಕೆ ಐ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿ ಸದಸ್ಯರಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಸ್ವಾಗತಿಸಿದರು‌. ಮೊಯ್ದಿನ್ ಮೋನು ಕಲ್ಕಟ್ಟ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News