ಮಂಗಳೂರು ಕಾರು , ಆಟೋರಿಕ್ಷಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಉದ್ಘಾಟನೆ
ಮಂಗಳೂರು: ಸಹಕಾರಿ ಸಂಸ್ಥೆಗಳ ಮೂಲಕ ರೈತರ ಮತ್ತು ಸಾಮಾನ್ಯ ವರ್ಗಗಳ ಜನರ ಜೀವನವನ್ನು ಬದಲಾವಣೆಯಾಗಿದೆ. ಗ್ರಾಮ ಮಟ್ಟದಲ್ಲಿ ಸುಧಾರಣೆ ಸಹಕಾರಿ ಕ್ಷೇತ್ರದ ಮೂಲಕ ಆಗಿದೆ ಎಂದು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಹೇಳಿದ್ದಾರೆ.
ನಗರದ ಪುರಭವನದಲ್ಲಿ ಸೋಮವಾರ ಮಂಗಳೂರು ಕಾರು ಮತ್ತು ಆಟೋರಿಕ್ಷಾ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರು ಮತ್ತು ಆಟೋರಿಕ್ಷಾ ಚಾಲಕರಿಗಾಗಿಯೇ ಈ ಸಂಸ್ಥೆ ಪ್ರಾರಂಭಗೊಂಡು ಐವತ್ತು ವರ್ಷಗಳನ್ನು ಕಳೆದುದುದು ಇದೊಂದು ರಾಜ್ಯದಲ್ಲಿಯೇ ಪ್ರಥಮ ಹೆಜ್ಜೆ ಎಂದು ಡಾ ಎಂ.ಎನ್ ರಾಜೇಂದ್ರ ಕುಮಾರ್ ಶ್ಲಾಘಿಸಿದರು.
ಆಶೀರ್ವಚನ ನೀಡಿದ ಮಂಗಳೂರು ಬಿಷಪ್ ವಂ.ಡಾ.ಪೀಟರ್ ಪೌಲ್ ಸಲ್ದಾನ ಮಾತನಾಡಿ ‘ಸಮಾಜದ ಸ್ವಂತ ಉದ್ಯೋಗಕ್ಕಾಗಿ ತಮ್ಮ ದುಡಿಮೆಗಾಗಿ ರಿಕ್ಷಾ ಮತ್ತು ಕಾರು ಚಾಲಕರು ಶ್ರಮಿಸುತ್ತಿದ್ದಾರೆ ಎಂದರು.
ವಿಧಾನ ಪರಿಷತ್ ಸದಸ್ಯ ಹಾಗೂ ಮಂಗಳೂರು ಕಾರು ಮತ್ತು ಆಟೋರಿಕ್ಷಾ ಸಹಕಾರಿ ಸಂಘದ ಐವನ್ ಡಿ ಸೋಜ ಅಧ್ಯಕ್ಷತೆ ವಹಿಸಿದ್ದರು.
ಸಹಕಾರಿ ಸಂಘಗಳ ಉಪನಿಬಂಧಕ ಎಚ್.ಎನ್. ರಮೇಶ್ ,ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೋ ,ರೋಹನ್ ಕಾರ್ಪೊರೇಶನ್‌ನ ಅಧ್ಯಕ್ಷ ರೋಹನ್ ಮೊಂತೆರೊ, ಎಚ್‌ಪಿಸಿಎಲ್ ಡಿಜಿಎಂ ನವೀನ್ ಕುಮಾರ್ ಎಂ.ಜಿ., ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್ ಮುಖ್ಯ ಅತಿಥಿಯಾಗಿದ್ದರು.
ಸಂಘದ ಉಪಾಧ್ಯಕ್ಷ ಸಿರಿಲ್ ಡಿ ಸೋಜ, ಕಾರ್ಯದರ್ಶಿ ಪ್ರಮೋದ್ ವಾಸ್ ಉಪಸ್ಥಿತರಿದ್ದರು.