×
Ad

ಇಲ್ಮ್ ಇಂಡಿಯಾದಿಂದ ಸರಕಾರಿ ಉದ್ಯೋಗ ಜಾಗೃತಿ ಶಿಬಿರ

Update: 2023-09-01 20:39 IST

ಮಂಗಳೂರು, ಸೆ.1:‘ಇಲ್ಮ್ ಇಂಡಿಯಾ’ ವತಿಯಿಂದ ಸರಕಾರಿ ಉದ್ಯೋಗ ಜಾಗೃತಿ-ಮಾಹಿತಿ ಶಿಬಿರವು ಬುಧವಾರ ನಗರದ ಬದ್ರಿಯಾ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಇಲ್ಮ್‌ಇಂಡಿಯಾದ ಸ್ಥಾಪಕಾಧ್ಯಕ್ಷ ನಾಸಿರ್ ಸಜಿಪ ಮಾತನಾಡಿ ಸರಕಾರಿ ಉದ್ಯೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ‘ಇಲ್ಮ್ ಇಂಡಿಯಾ’ವನ್ನು 2006ರಲ್ಲಿ ಸ್ಥಾಪಿಸಲಾಗಿದೆ. ಆದರೆ ಮುಸ್ಲಿಂ ಸಮುದಾಯದ ಯುವಕರಿಂದ ಸರಿಯಾದ ಸ್ಪಂದನೆ ದೊರೆಯುತ್ತಿಲ್ಲ ಎಂದರು.

ಇಲ್ಮ್ ಇಂಡಿಯಾದ ಉಪಾಧ್ಯಕ್ಷ ಡಿ.ಐ ಅಬೂಬಕ್ಕರ್ ಕೈರಂಗಳ ಮಾತನಾಡಿ ಸಮುದಾಯದ ಉನ್ನತಿಗಾಗಿ ‘ಇಲ್ಮ್ ಇಂಡಿಯಾ’ದ ಜೊತೆ ಮುಸ್ಲಿಂ ಸಮುದಾಯದ ನಾಯಕರು ಕೈ ಜೋಡಿಸಬೇಕು’ ಎಂದು ಮನವಿ ಮಾಡಿದರು.

ಬದ್ರಿಯಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪಿ.ಬಿ. ಅಬ್ದುಲ್ ಹಮೀದ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೆನೆಪೋಯ ನಾಗರಿಕ ಸೇವಾ ಸಂಸ್ಥೆಯ ತರಬೇತುದಾರ ಮುಹಮ್ಮದ್ ಅಲಿ ರೂಮಿ ಮಾಹಿತಿ ನೀಡಿದರು. ’ಇಲ್ಮ್ ಇಂಡಿಯಾ’ದ ಸದಸ್ಯ ಪಿ.ಎಂ. ಇಕ್ಬಾಲ್ ಕೈರಂಗಳ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News