×
Ad

ಪಂಪ್‌ವೆಲ್ ಮಸ್ಜಿದ್ ತಕ್ವಾದಲ್ಲಿ ಬೃಹತ್‌ ಮೌಲಿದ್‌ ಸಂಗಮ

Update: 2024-10-02 11:12 IST

ಮಂಗಳೂರು: ಮಸ್ಜಿದ್ ತಕ್ವಾ ಪಂಪ್‌ವೆಲ್ ಇದರ ಆಶ್ರಯದಲ್ಲಿ ದಿನಾಂಕ 20.09.2024 ರಂದು ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಮಗ್ರಿಬ್ ನಮಾಝ್‌ ನ ಬಳಿಕ  ಬೃಹತ್ ಮೌಲಿದ್ ಸಂಗಮ ನಡೆಯಿತು.

 ಮಸ್ಜಿದ್ ಅಧ್ಯಕ್ಷರಾದ  ಡಾ. ಹಾಜಿ ಯೇನಪೋಯ ಅಬ್ದುಲ್ಲ ಕುಞ್ಞಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಸ‌ಯ್ಯಿದ್ ಅಶ್ರಫ್ ತಂಙಳ್ ಆದೂರು (ಚೇರ್ಮನ್ ಎಜು ಪಾರ್ಕ್ ಮುಡಿಪು) ದುಆ ನೆರವೇರಿಸಿದರು. ಡಾ. ಹಾಜಿ ಎಸ್ಎಂ ರಶೀದ್ ಅವರು ಸ್ವಾಗತ ಕೋರಿದರು. ಯಾಸಿರ್ ಸಖಾಫಿ  ಅಲ್ ಅಝ್‌ಹರಿ ಸಂದೇಶ ಭಾಷಣ ಮಾಡಿದರು.  

ಮಸ್ಜಿದ್ ತಕ್ವಾ ಇದರ ಮಾಜಿ ಇಮಾಂ ಹಾಫಿಝ್ ಅಬ್ದುಲ್ ರಹ್ಮಾನ್ ಸಖಾಫಿ, ಈದ್ಗಾ ಮಸ್ಜಿದ್ ಇಮಾಂ ಮುಸ್ತಫ ಸಖಾಫಿ, ಕಂಕನಾಡಿ ರಹ್ಮಾನಿಯ ಜುಮಾ ಮಸ್ಜಿದ್ ಇಮಾಂ, ಮಸ್ಜಿದ್ ತಕ್ವಾ‌ ಮುಅದ್ದಿನ್ ಇಬ್ರಾಹಿಂ ಮುಸ್ಲಿಯಾರ್, ಮಸ್ಜಿದ್ ತಕ್ವಾ ಇದರ ಕಾರ್ಯದರ್ಶಿ ಹಾಜಿ ಬಿಎಂ ಮುಮ್ತಾಝ್ ಅಲಿ, ವೈಸ್ ಚೇರ್ಮನ್ ಹಾಜಿ ಮುಹಮ್ಮದ್ ಅರಬಿ,  ಮ್ಯಾಕ್ಸ್ ಗ್ರೂಪ್ ಟ್ರಸ್ಟಿಗಳಾದ ಹಾಜಿ ಬಿ ಎಂ ಶೌಕತ್‌ ಅಲಿ,  ಹಾಜಿ ಮುಹಮ್ಮದ್ ಬಷೀರ್, ಹಾಜಿ ಮುಹಮ್ಮದ್ ಕುದ್ರೋಳಿ ಬಿ‌ಎಮ್ ನಝೀರ್ ಕೃಷ್ಣಾಪುರ ಉಪಸ್ಥಿತರಿದ್ದರು

 ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ಏರ್ಪಡಿಸಲಾಗಿತ್ತು ಎಂದು ಇಸ್ಲಾಮಿಕ್‌ ಕಲ್ಚರಲ್‌ ಸೆಂಟರ್‌ ಮಸ್ಜಿದ್ ತಕ್ವಾ ಪಂಪ್‌ವೆಲ್ ಇದರ ವ್ಯವಸ್ಥಾಪಕ ಜಿ ಎಂ ಹಸನ್‌ ಕುಞ್ಞಿ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News