×
Ad

ಮಂಗಳೂರು: ನಗರದಲ್ಲಿ ಜಿಎಸ್‌ಟಿ ಸೈಕಲ್ ಮ್ಯಾರಥಾನ್

Update: 2025-05-18 18:04 IST

ಮಂಗಳೂರು: ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ಜಾರಿಯ 8ನೇ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಜಿಎಸ್‌ಟಿ ಮಂಗಳೂರು ಆಯುಕ್ತಾಲಯದ ಆಶ್ರಯದಲ್ಲಿ ರವಿವಾರ ನಗರದಲ್ಲಿ ಸೈಕಲ್ ಮ್ಯಾರಥಾನ್ ನಡೆಯಿತು.

ಅತ್ತಾವರದಲ್ಲಿರುವ ಕೇಂದ್ರ ಕಂದಾಯ ಕಟ್ಟಡದಿಂದ ಮ್ಯಾರಥಾನ್ ಮಂಗಳೂರಿನ ಕೇಂದ್ರ ತೆರಿಗೆ ಮತ್ತು ಸಿಜಿಎಸ್‌ಟಿ ಕಚೇರಿಯ ಸಹಾಯಕ ಆಯುಕ್ತ ಎಸ್.ಕೇಶವ ನಾರಾಯಣ ರೆಡ್ಡಿ ಸೈಕಲ್ ಮ್ಯಾರಥಾನ್‌ಗೆ ಚಾಲನೆ ನೀಡಿದರು.

ಮುಂಬರುವ ಜುಲೈ 1ರಂದು ಜಿಎಸ್ಟಿಯ 8 ವಾರ್ಷಿಕವನ್ನು ಆಚರಿಸಲಾಗುವುದು. ಇದಕ್ಕೆ ಪೂರ್ವಭಾವಿಯಾಗಿ ಭಾರತೀಯ ಆರ್ಥಿಕತೆಯ ಮೇಲೆ ಜಿಎಸ್‌ಟಿಯು ಸಕಾರಾತ್ಮಕ ಪರಿಣಾಮದ ಬಗ್ಗೆ ಮತ್ತು ಸೈಕ್ಲಿಂಗ್ ಮೂಲಕ ಫಿಟ್ನೆಸ್ ಮತ್ತು ಪರಿಸರ ಸುಸ್ಥಿರತೆ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.

2017 ರಂದು ಜಾರಿಗೆ ಬಂದಿರುವ ಜಿಎಸ್ಟಿ ವ್ಯವಸ್ಥೆಯು ವಿವಿಧ ಪರೋಕ್ಷ ತೆರಿಗೆಗಳನ್ನು ಒಂದೇ ತೆರಿಗೆಯಾಗಿ ಕ್ರೋಢೀಕರಿಸುವ ಮೂಲಕ ಭಾರತೀಯ ಆರ್ಥಿಕತೆಯಲ್ಲಿ ಕ್ರಾಂತಿಯನ್ನುಂಟು ಮಾಡಿದೆ.

ಸಿಜಿಎಸ್‌ಟಿಯ ಹೆಚ್ಚುವರಿ ವೈಭವ್ ಕಿರಣ್ ಪಗಾರೆ, ಸೈಕಲ್ ಕ್ಲಬ್ ಅಧ್ಯಕ್ಷ ಅನಿಲ್ ಶೇಟ್ , ಸಿಜಿಎಸ್‌ಟಿ ಕಚೇರಿಯ ನಿವೃತ್ತ ಅಧಿಕಾರಿಗಳು , ಕಸ್ಟಮ್ಸ್ ಅಧಿಕಾರಿಗಳು, ಮಂಗಳೂರು ಸೈಕಲ್ ಕ್ಲಬ್‌ನ ಸದಸ್ಯರು , ಕೈಗರಿಕಾ ಸಂಸ್ಥೆಗಳ ಪ್ರತಿನಿಧಿಗಳು ಸೈಕಲ್ ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದರು.


Delete Edit


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News