ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಸಾಹಿತ್ಯೋತ್ಸವ: ಅರಬಿಕ್ ಕ್ಯಾಲಿಗ್ರಫಿಯಲ್ಲಿ ಹಾಫಿಲ್ ಮುಹಮ್ಮದ್ ಯೂಸುಫ್ ಸಫ್ವಾನ್ ಪ್ರಥಮ
Update: 2025-11-16 17:38 IST
ಮಂಗಳೂರು: ಕಲಬುರಗಿಯಲ್ಲಿ ನಡೆದ ಎಸ್ಸೆಸ್ಸೆಫ್ ರಾಷ್ಟ್ರಮಟ್ಟದ ಸಾಹಿತ್ಯೋತ್ಸವದ ಅರಬಿಕ್ ಕ್ಯಾಲಿಗ್ರಫಿ ಸ್ಪರ್ಧೆಯಲ್ಲಿ ಸರಳಿಕಟ್ಟೆಯ ಹಾಫಿಲ್ ಮುಹಮ್ಮದ್ ಯೂಸುಫ್ ಸಫ್ವಾನ್ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು ಮಹಾರಾಷ್ಟ್ರದ ಪುಣೆಯ ಸಿದ್ರಾ ಇನ್‌ಸ್ಟಿಟ್ಯೂಟ್ ಆಫ್ ಲೀಡರ್‌ಶಿಪ್ ಆ್ಯಂಡ್ ಎಕ್ಸಲೆನ್ಸ್‌ನ ವಿದ್ಯಾರ್ಥಿ.
ಸಫ್ವಾನ್ ಬಾಜಾರು ನಿವಾಸಿ ಅಬ್ದುರ‌್ರಝಾಕ್ ಮದನಿ ಮತ್ತು ಝುಬೈದಾ ದಂಪತಿಯ ಪುತ್ರ.