×
Ad

ನಿಝಾಮಿ ಅಲ್ ಫಾರೂಖಿ ಪದವಿಯನ್ನು ಪ್ರಥಮ ಸ್ಥಾನದೊಂದಿಗೆ ಪಡೆದ ಹಾಜಿ ಮುಹಮ್ಮದ್ ಹನೀಫ್ ನಂದರಬೆಟ್ಟು

Update: 2025-03-05 13:15 IST

ಬಂಟ್ವಾಳ : ಮೂಡಿಗೆರೆ ಜಾಮಿಯಾ ನಿಝಾಮಿಯಾ ಅಲ್ ಫಾರೂಖಿಯಾ ಇದರ ಆಶ್ರಯದಲ್ಲಿ ನಡೆಸುತ್ತಿರುವ 2024-25ನೇ ಸಾಲಿನ ನಿಝಾಮಿಯಾ ಅಲ್ ಫಾರೂಖಿಯಾ ಮುಖ್ತಸರ್ ಕೋರ್ಸ್ ನಲ್ಲಿ ಬಿ.ಸಿ.ರೋಡ್ ಸಮೀಪದ ನಂದರಬೆಟ್ಟು ನಿವಾಸಿ 62 ವರ್ಷ ಪ್ರಾಯದ ಹಾಜಿ ಮುಹಮ್ಮದ್ ಹನೀಫ್ ಪ್ರಥಮ ಸ್ಥಾನದೊಂದಿಗೆ ಕೋರ್ಸ್ ಪೂರ್ತಿಗೊಳಿಸಿದ್ದಾರೆ.

ಇತ್ತೀಚಿಗೆ ಮೂಡಿಗೆರೆಯಲ್ಲಿ ನಡೆದ ಜಾಮಿಯಾದ 7ನೇ ವಾರ್ಷಿಕ ಹಾಗೂ 5 ನೇ ಸನದು ದಾನ ಸಮ್ಮೇಳನದಲ್ಲಿ ನಿಝಾಮಿ ಅಲ್ ಫಾರೂಖಿ ಪದವಿ ಸ್ವೀಕರಿಸಿದರು.

ಮುಹಮ್ಮದ್ ಅವರು ಮಿತ್ತಬೈಲ್ ಸ್ವದೇಶಿ ರೇಂಜ್ ಚೇರ್ಮೆನ್ ಆಗಿ, ಮಿತ್ತಬೈಲ್ ವಲಯ ಎಸ್.ವೈ.ಎಸ್ ನ ಅದ್ಯಕ್ಷರಾಗಿ, ಎಸ್.ಯು.ಸಿ.ಸಿ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News