×
Ad

ತಾಜುಲ್ ಉಲಮಾ ರಿಲೀಫ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿಧವೆಗೆ ಮನೆ ಹಸ್ತಾಂತರ

Update: 2023-12-24 13:58 IST

ಕಡಬ: ತಾಜುಲ್ ಉಲಮಾ ರಿಲೀಫ್ ಮತ್ತು ಚಾರಿಟಬಲ್ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಇದರ ಅಧೀನದಲ್ಲಿ, "ವಿಧವೆಗೊಂದು ಮನೆ" ಅಭಿಯಾನದಡಿ, ಕಡಬ ತಾಲೂಕಿನ ಪೆರಾಬೆ ಗ್ರಾಮದ ಕುಂತೂರು ಎಂಬಲ್ಲಿ ನಿರ್ಮಿಸಿದ "ತಾಜುಲ್ ಉಲಮಾ ಮಂಝಿಲ್" ಮನೆಯನ್ನು ಐದನೇ ಫಲಾನುಭವಿ ವಿಧವೆಗೆ ಹಸ್ತಾಂತರಿಸುವ ಕಾರ್ಯಕ್ರಮ ದಿನಾಂಕ 23-12-2023 ಶನಿವಾರದಂದು ನಡೆಯಿತು.

ಸಯ್ಯಿದ್ ಝೈನುಲ್ ಆಬಿದೀನ್ ಜಮಲುಲ್ಲೈಲಿ ತಂಙಲ್ ಕಾಜೂರು ಮನೆಯನ್ನು ಉದ್ಘಾಟಿಸಿ ಹಸ್ತಾಂತರಿಸಿದರು.

ಇರ್ಷಾದ್ ದಾರಿಮಿ ಅಲ್- ಜಝರಿ ಮಜ್ಲಿಸಿಗೆ ನೇತೃತ್ವ ವಹಿಸಿದರು. ಮುಹಮ್ಮದ್ ಶರೀಫ್ ಮದನಿ ಪಾಂಡವರಕಲ್ಲು ಪ್ರಾಸ್ತಾವಿಕ ಭಾಷಣ ಮಾಡಿದರು. ಸಂಸ್ಥೆಯ ಮುಂದಿನ ಮಹತ್ವಾಕಾಂಕ್ಷಿ ಯೋಜನೆಯಾದ, ಸರ್ಕಾರಿ ಆಸ್ಪತ್ರೆಯೊಂದಕ್ಕೆ ಡಯಾಲಿಸಿಸ್ ಯಂತ್ರ ವಿತರಿಸುವ ಬಗ್ಗೆ ಪ್ರಕಟಣೆ ನೀಡಲಾಯಿತು.

ಕಾರ್ಯ್ರಮದಲ್ಲಿ, ಕುಂತೂರು ಜುಮಾ ಮಸೀದಿ ಖತೀಬರಾದ ಮೊಯ್ದು ಫೈಝಿ, ಜಮಾಅತ್ ಅಧ್ಯಕ್ಷರಾದ ಹಸೈನಾರ್ ಹಾಜಿ, ಟ್ರಸ್ಟ್ ಅಧ್ಯಕ್ಷರಾದ ಮುಹಮ್ಮದ್ ಇಕ್ಬಾಲ್ ವಗ್ಗ, ಟ್ರಸ್ಟಿಗಳಾದ ಮುಹಮ್ಮದ್ ಇಲ್ಯಾಸ್ ಕುಲಾಲ್, ಕಾರ್ಯದರ್ಶಿ ರಾಝಿಕ್, ಸೇರಿದಂತೆ ಹಲವಾರು ನಾಯಕರು ಹಾಗೂ ದಾನಿಗಳು ಉಪಸ್ಥಿತರಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News