×
Ad

ಹರೇಕಳ | ರಸ್ತೆಗೆ ಅಡ್ಡ ಬಂದ ಕಾಡು ಹಂದಿ; ಸ್ಕೂಟರ್‌ನಿಂದ ಬಿದ್ದು ವೃದ್ದೆ ಮೃತ್ಯು

Update: 2025-03-17 14:39 IST

ಕೊಣಾಜೆ: ಸ್ಕೂಟರ್‌ಗೆ ಕಾಡು ಹಂದಿಯೊಂದು ಅಡ್ಡ ಬಂದ ಪರಿಣಾಮ ವೃದ್ಧೆಯೊಬ್ಬರು ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿರುವ ಘಟನೆ ಹರೇಕಳ ಗ್ರಾಮದ ಖಂಡಿಗ ಎಂಬಲ್ಲಿ ಕಳೆದ ಶನಿವಾರ ತಡರಾತ್ರಿ ಸಂಭವಿಸಿದೆ.

ಮೃತರನ್ನು ದೇವಕಿ ಮಾಣೈ(72) ಎಂದು ಗುರುತಿಸಲಾಗಿದೆ.

ವರದರಾಜ್ ಮಾಣೈ ಎಂಬವರು ತನ್ನ ತಾಯಿ ದೇವಕಿ ಮಾಣೈ ಅವರನ್ನು ಶನಿವಾರ ರಾತ್ರಿ ಬಜಾಲಿನ ಸಂಬಂಧಿಕರ ಮನೆಯಿಂದ ಸ್ಕೂಟರ್‌ನಲ್ಲಿ ಅಡ್ಯಾರು-ಪಾವೂರು ಮಾರ್ಗವಾಗಿ ಹರೇಕಳದ ಮನೆಗೆ ಮರಳುತ್ತಿದ್ದ ವೇಳೆ ದಾರಿ ಮಧ್ಯದ ಖಂಡಿಗ ಎಂಬಲ್ಲಿನ ಹಳೇ ಪಂಚಾಯತ್ ಕಚೇರಿ ಕಟ್ಟಡದ ಬಳಿಯ ಗುಡ್ಡಕಾಡು ಪ್ರದೇಶದಿಂದ ಕಾಡು ಹಂದಿಯೊಂದು ದಿಢೀರನೆ ರಸ್ತೆ ಕಡೆ ಧಾವಿಸಿದೆ. ಈ ವೇಳೆ ಸ್ಕೂಟರ್ ಚಲಾಯಿಸುತ್ತಿದ್ದ ವರದರಾಜ್ ಅವರು ಬ್ರೇಕ್ ಹಾಕಿದ ಪರಿಣಾಮ ತಾಯಿ ಮತ್ತು ಮಗ ರಸ್ತೆಗೆಸೆಯಲ್ಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ದೇವಕಿ ಅವರಿಗೆ ಹರೇಕಳದ ಕ್ಲಿನಿಕ್ ಒಂದರಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ತಡರಾತ್ರಿಯೇ ಮೃತಪಟ್ಟಿದ್ದಾರೆ.

ಘಟನೆ ಸಂಬಂಧ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News