×
Ad

ದ್ವೇಷ ಭಾಷಣ| ಡಾ. ದಯಾಕರ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದೂರು

Update: 2024-09-04 21:19 IST

ಬೆಳ್ತಂಗಡಿ; ಉಜಿರೆಯಲ್ಲಿ ನಡೆದ ಹಿಂದೂ ಸಮಾಜೋತ್ಸವ ಸಮಾವೇಶದಲ್ಲಿ ದ್ವೇಷ ಭಾಷಣವನ್ನು ಮಾಡಿದ್ದಾರೆ ಎಂದು ಉಜಿರೆಯ ಡಾ. ದಯಾಕರ್ ವಿರುದ್ಧ SDPI ಉಜಿರೆ ಬ್ಲಾಕ್ ಸಮಿತಿ ವತಿಯಿಂದ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಯಿತು. ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಉಜಿರೆ ಬ್ಲಾಕ್ ಸಮಿತಿ ಸದಸ್ಯರಾದ ಅಶ್ರಫ್ ಚಾರ್ಮಾಡಿ, ಚಾರ್ಮಾಡಿ ಪಂಚಾಯತ್ ಸದಸ್ಯರಾದ ಸಿದ್ದಿಕ್ ಯು.ಪಿ, ಚಾರ್ಮಾಡಿ ಬ್ರಾಂಚ್ ಅಧ್ಯಕ್ಷರಾದ ರಹೀಮ್ ಚಾರ್ಮಾಡಿ, ಕುಂಟಿನಿ ಬ್ರಾಂಚ್ ಅಧ್ಯಕ್ಷರಾದ ಅಸೀರ್ ಕುಂಟಿನಿ, ಅಹ್ಮದ್ ಕಬೀರ್, ಅರೀಫ್ ಕುಂಟಿನಿ, ಅನ್ವರ್, ರೌಫ್ ಕುಂಟಿನಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News