×
Ad

ದ.ಕ. ಜಿಲ್ಲೆಯಲ್ಲಿ ಭಾರೀ ಮಳೆ: ಮನೆಗಳಿಗೆ ಹಾನಿ

Update: 2025-05-21 22:29 IST

ಮಂಗಳೂರು: ಮಳೆಯಿಂದಾಗಿ ಬುಧವಾರ ದ.ಕ. ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಹಾನಿಯಾಗಿದ್ದು, ಮೂರು ಮನೆಗಳಿಗೆ ಭಾಗಶ: ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.

ಮಂಗಳೂರು ತೋಟ ಗ್ರಾಮದ ಎಮ್ಮೆಕೆರೆ ಎಂಬಲ್ಲಿ ಸಂಪ ಶೆಟ್ಟಿ ಎಂಬವರ ಮತ್ತು ಬಂಟ್ವಾಳದ ಮೇರಮಜಲು ಎಂಬಲ್ಲಿ ಬರೆ ಜರಿದು ಚಂದ್ರಾವತಿ ಎಂಬವರ ಮನೆಗೆ ಹಾನಿಯಾಗಿದೆ

ಮಂಗಳೂರಿನ ದೇರೆಬೈಲು ಗ್ರಾಮದ ಮಾಲೆಮಾರ್ ಎಂಬಲ್ಲಿ ವೇದಾವತಿ ಎಂಬವರ ಮನೆಗೆ ಆವರಣ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ದ.ಕ. ಜಿಲ್ಲೆಯಲ್ಲಿ ಸುರಿದ ಮಳೆಯ ಪ್ರಮಾಣ ಇಂತಿವೆ:

ದಕ್ಷಿಣ ಕನ್ಣಡ ಸರಾಸರಿ : 61.8

ಮೂಲ್ಕಿ - 96.0 ಮಿ.ಮೀ

ಮೂಡಬಿದ್ರೆ - 90.9 ಮಿ.ಮೀ

ಉಳ್ಳಾಲ- 88.9 ಮಿ.ಮೀ

ಮಂಗಳೂರು - 86.5 ಮಿ.ಮೀ

ಬಂಟ್ವಾಳ - 65.8 ಮಿ.ಮೀ

ಬೆಳ್ತಂಗಡಿ - 60.4 ಮಿ.ಮೀ

ಕಡಬ - 48.6 ಮಿ.ಮೀ

ಸುಳ್ಯ - 48.4 ಮಿ.ಮೀ

ಪುತ್ತೂರು - 48.1 ಮಿ.ಮೀ

►ಮಳೆಯಿಂದಾಗಿ ಎರಡು ಮನೆಗಳಿಗೆ ( ಬಂಟ್ವಾಳ ಮತ್ತು ಮಂಗಳೂರು) ಹಾನಿಯಾಗಿದೆ. ಮಂಗಳೂರು ತಾಲೂಕಿನಲ್ಲಿ 3 ಮನೆಗಳು ಭಾಗಶ: ಹಾನಿಯಾಗಿದೆ.

►ಮೆಸ್ಕಾಂನ 60 ವಿದ್ಯುತ್ ಕಂಬಗಳು ಮತ್ತು 1 ಟ್ರಾನ್ಸ್‌ಫಾರ್ಮರ್ ಹಾನಿಯಾಗಿದೆ.

ನದಿ ನೀರಿನ ಮಟ್ಟ : ಮಳೆಯಿಂದಾಗಿ ನೀರಿನ ಮಟ್ಟದಲ್ಲಿ ಹೆಚ್ಚು ಬದಲಾವಣೆ ಆಗಿಲ್ಲ. ನೇತ್ರಾವತಿ ನದಿಯಲ್ಲಿ ಬಂಟ್ವಾಳದಲ್ಲಿ ನೀರಿನ ಮಟ್ಟ 3 ಮೀಟರ್, ಉಪ್ಪಿನಂಗಡಿಯಲ್ಲಿ 23.60 ಮೀಟರ್‌ಗಿಂತ ಕೆಳಗಿದೆ.

ಜಿಲ್ಲೆಯಲ್ಲಿ ನೇತ್ರಾವತಿ ನದಿಯ ಅಣೆಕಟ್ಟುಗಳ ನೀರಿನ ಮಟ್ಟ: ಎಎಂಆರ್ ಬಂಟ್ವಾಳ 18.90 ಮೀಟರ್, ತುಂಬೆ 6.00 ಮೀಟರ್, ಹರೇಕಳ ಅಡ್ಯಾರ್ 1.00 ಮೀಟರ್, ಬೆಳಿಯೂರು 4.00 ಮೀಟರ್, ಜಕ್ರಿಬೆಟ್ಟು 3.50 ಮೀಟರ್

ಫಲ್ಗುಣಿ ನದಿ : ಮಳವೂರು ಅಣೆಕಟ್ಟು 2.00 ಮೀಟರ್, ಸೋಹಮ್(ಇರುವೈಲು) 0.2 ಮೀಟರ್

ಬೆಳಗ್ಗೆ 8:30ರ ತನಕ ಜಿಲ್ಲೆಯ ಮಂಗಳೂರಿನ ನೀರ್‌ಮಾರ್ಗದಲ್ಲಿ ಗರಿಷ್ಠ 157 ಮಿ.ಮೀ ಮಳೆಯಾಗಿದೆ. ಬಂಟ್ವಾಳದ ಮೇರಮಜಲು 147 ಮೀ.ಮೀ, ಉಳ್ಳಾಲದ ಕೋಟೆಕಾರ್ 128 ಮಿ.ಮೀ, ಬಂಟ್ವಾಳದ ಪುದು 126ಮಿ.ಮೀ, ಬಂಟ್ವಾಳದ ಬಡಗಬೆಳ್ಳೂರು 120.5 ಮಿ.ಮೀ, ಉಳ್ಳಾಲದ ತಲಪಾಡಿ 115 ಮಿ.ಮೀ, ಕಿನ್ಯ 111 ಮಿ.ಮೀ, ಮೂಲ್ಕಿಯ ಐಕಳ 108 ಮಿ.ಮೀ, ಉಳ್ಳಾಲದ ಮುನ್ನೂರ್ 107.5 ಮೀ.ಮೀ, ಬಂಟ್ವಾಳದ ಅಮ್ಟಾಡಿ 107 ಮಿ.ಮೀ, ರಾಯಿ 101ಮಿ.ಮೀ ಮಳೆ ದಾಖಲಾಗಿದೆ. ಬಂಟ್ವಾಳದ ವಿಟ್ಲಪಡ್ನೂರಿನಲ್ಲಿ ಕನಿಷ್ಠ ಮಳೆ (39.5 ಮಿ.ಮೀ ) ದಾಖಲಾಗಿರುವುದು ವರದಿಯಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News