×
Ad

ಬಂಟ್ವಾಳದಲ್ಲಿ ಮುಂದುವರಿದ ಮಳೆ: ಹಲವೆಡೆ ವ್ಯಾಪಕ ಹಾನಿ

Update: 2025-05-26 00:01 IST

ಬಂಟ್ವಾಳ : ತಾಲೂಕಿನಾದ್ಯಂತ ಮಳೆ ಮುಂದುವರಿದಿದ್ದು, ಮಳೆ ಹಾನಿ ಪ್ರಕರಣಗಳೂ ಮುಂದುವರಿದಿದೆ. ಕಾಡಬೆಟ್ಟು ಗ್ರಾಮದ ವಗ್ಗ ಎಂಬಲ್ಲಿ ವಾಸ್ತವ್ಯ ಇಲ್ಲದ ಮನೆಯ ತಡೆ ಗೋಡೆ ಕುಸಿದಿದೆ. ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯ ಉಕ್ಕುಡ ದರ್ಬೆಯಲ್ಲಿ ಶಿಥಿಲಗೊಂಡ ಛಾವಣಿಗೆ ಟಾರ್ಪಲ್ ಅಳವಡಿಸಲು ಕ್ರಮವಹಿಸಲಾಗಿದೆ. ಪುದು ಗ್ರಾಮದ ಅಮ್ಮೆಮಾರ್ ನಿವಾಸಿ ಅಬೂಬಕ್ಕರ್ ಬಿನ್ ಹಸನಬ್ಬ ಅವರ ಮನೆ ಗೋಡೆ ಹಾಗೂ ಹಂಚಿಗೆ ಹಾನಿಯಾಗಿದೆ. ಬಡಗಬೆಳ್ಳೂರು ಗ್ರಾಮದ ನಿವಾಸಿ ಮಮತಾ ಅವರ ಮನೆಯ ಬದಿ ತಡೆಗೋಡೆ ಬಿದ್ದು ಮನೆಗೆ ಹಾನಿಯಾಗಿದೆ.

ನೆಟ್ಲಮುಡ್ನೂರು ಗ್ರಾಮದ ಪರ್ಲೊಟ್ಟು ಬಳಿ ಮರ ಬಿದ್ದು ಕಾಲು ಸಂಕ ಮುರಿದು ಬಿದ್ದಿದೆ. ಸಜಿಪಮುನ್ನೂರು ಗ್ರಾಮದ ನಿವಾಸಿ ಮುಬಾರಕ್ ಅವರ ಮನೆಗೆ ಸ್ಥಳೀಯ ಚರಂಡಿಯ ನೀರು ನುಗ್ಗಿದ್ದು, ಮನೆ ಮಂದಿಯನ್ನು ಸ್ಥಳಾಂತರಿಸಲಾಗಿದೆ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News