×
Ad

ಹಿಂದಿ ಭಾಷೆಯನ್ನು ಉಳಿಸಿ ಬೆಳೆಸಬೇಕಾಗಿದೆ: ಪ್ರೊ. ಗಣಪತಿ ಗೌಡ

Update: 2024-09-14 21:41 IST

ಮಂಗಳೂರು, ಸೆ.12: ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಶನಿವಾರ ಹಿಂದಿ ವಿಭಾಗ ,ಆಂತರಿಕ ಗುಣಮಟ್ಟ ಖಾತರಿಕೋಶ ಮತ್ತು ಗ್ರಂಥಾಲಯದ ವತಿಯಿಂದ ಹಿಂದಿ ದಿನಾಚರಣೆಯ ಅಂಗವಾಗಿ ಗ್ರಂಥಾವಲೋಕನ, ಪುಸ್ತಕ ಪ್ರದರ್ಶನ ಮತ್ತು ಪುಸ್ತಕ ವಿಮರ್ಶೆ ಕಾರ್ಯಕ್ರಮ ನಡೆಯಿತು .

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಗಣಪತಿ ಗೌಡ, ಹಿಂದಿ ಭಾರತದ ಪ್ರಾಚೀನ ಭಾಷೆ, ಇದರ ಸಾಹಿತ್ಯ ಸಮೃದ್ದವಾಗಿದೆ. ನಮ್ಮ ರಾಷ್ಟ್ರ ಭಾಷೆಯಾದ ಹಿಂದಿಯನ್ನು ದೇಶದ ಐಕ್ಯತೆಗಾಗಿ ಉಳಿಸಿ ಬೆಳೆಸಬೇಕು, ಎಂದರಲ್ಲದೆ, ವಿದ್ಯಾರ್ಥಿಗಳಿಗೆ ಗ್ರಂಥಾಲಯವನ್ನು ಹೆಚ್ಚಾಗಿ ಬಳಸಿ, ಓದುವ ಹವ್ಯಾಸ ರೂಢಿಸಿಕೊಳ್ಳಿ ಎಂದು ಶುಭಹಾರೈಸಿದರು.

ಹಿಂದಿ ವಿಭಾಗದ ಸಂಯೋಜಕಿ ಪ್ರೊ.ನಾಗರತ್ನ .ಎನ್.ರಾವ್, ಪ್ರಾಸ್ತಾವಿಕ ಭಾಷಣದಲ್ಲಿ ಹಿಂದಿ ಭಾಷೆಯ ಮಹತ್ವವನ್ನು ವಿವರಿಸಿದರು. ಗ್ರಂಥಪಾಲಕಿ ಡಾ .ವನಜಾ ಸ್ವಾಗತಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ಕುಮಾರ ಸುಬ್ರಮಣ್ಯ ಭಟ್, ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಪ್ರೊ. ಜಗನಾಥ್ ಎನ್, ಹಿಂದಿ ವಿಭಾಗದ ಉಪನ್ಯಾಸಕರು, ಹಿಂದಿ ಸಂಶೋಧನಾರ್ಥಿಗಳು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು .

ಪ್ರಥಮ ಬಿ.ಎ ವಿದ್ಯಾರ್ಥಿ ಅಮಿತ್ ಶುಕ್ಲಾ, ‘ಪ್ರೇಮಚಂದ್ ‘ರವರ ಉಪನ್ಯಾಸ ‘‘ಗಬನ್’’ ನ ಪುಸ್ತಕ ವಿಮರ್ಶೆ ನಡೆಸಿದರು . ಅಸ್ತುತಿ ಕಾರ್ಯಕ್ರಮ ನಿರೂಪಿಸಿದರು. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News