ಗೃಹ ಸಚಿವ ಪರಮೇಶ್ವರ್‌ರ ಹುಟ್ಟುಹಬ್ಬ ಆಚರಣೆ
ಮಂಗಳೂರು, ಅ.6: ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರ 74ನೇ ಹುಟ್ಟುಹಬ್ಬದ ಪ್ರಯುಕ್ತ ಬುಧವಾರ ದ.ಕ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರೇಮ್‌ನಾಥ್ ಪಿ.ಬಿ ಬಳ್ಳಾಲ್‌ಬಾಗ್‌ರ ನೇತೃತ್ವದಲ್ಲಿ ನಗರದ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಪೂಜೆ ಪುನಸ್ಕಾರ ನೆರವೇರಿಸಲಾಯಿತು. ಬಳಿಕ ನೆಹರೂ ಮೈದಾನ, ವೆನ್ಲಾಕ್ ಆಸ್ಪತ್ರೆ ಬಳಿ ಸಾರ್ವಜಿನಿಕ ಅನ್ನಸಂತರ್ಪಣೆ ನೆರವೇರಿಸಲಾಯಿತು.
ಈ ಸಂದರ್ಭ ಜಿಲ್ಲಾ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ದಿನೇಶ್ ಮೂಳೂರು, ಜಿಲ್ಲಾ ಹಿಂದೂ ಧಾರ್ಮಿಕ ದತ್ತಿ ಪರಿಷತ್ ಸದಸ್ಯೆ ಚಂದ್ರಕಲಾ ಡಿ.ರಾವ್, ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ನಾಮನಿರ್ದೇಶನ ಸದಸ್ಯರಾದ ಹರಿನಾಥ್ ಜೋಗಿ, ರಾಜೇಂದ್ರ ಚಿಲಿಂಬಿ, ಕಿರಣ್‌ಕುಮಾರ್ ಕೊಡಿಯಾಲ್‌ಬೈಲ್, ಮುಖಂಡರಾದ ಭರತ್‌ಬಳ್ಳಾಲ್ ಭಾಗ್, ಮೇಘರಾಜ್, ರಶ್ಮಿತಾ ಆರ್.ಕೆ, ಕೀರ್ತನ್, ಗಗನ್, ಅಮೋಘ್, ವೀಕ್ಷಿತ್, ಸೃಜನ್, ಆದಿತ್ಯ, ರಿತೇಶ್, ಸೀತರಾಮ್, ಸುಮಂತ್, ಅಶ್ವಿನ್, ಹರ್ಷ, ರಫಿ, ವಿನಿತ್ ಉಪಸ್ಥಿತರಿದ್ದರು.