×
Ad

ಮನೆ ಬಾಡಿಗೆ ನೀಡುವವರು ದಾಖಲೆ ಪತ್ರ ಪಡೆದುಕೊಳ್ಳಿ: ಪಡುಬಿದ್ರೆ ಪೊಲೀಸ್ ಠಾಣೆಯ ಎಸ್‍ಐ ಮನವಿ

Update: 2023-11-10 22:35 IST

ಪಡುಬಿದ್ರೆ: ಪಡುಬಿದ್ರಿ ಪರಿಸರದಲ್ಲಿ ಮನೆ ಬಾಡಿಗೆ ನೀಡುವವರು ಕಡ್ಡಾಯವಾಗಿ ದಾಖಲೆ ಪತ್ರಗಳನ್ನು ಪಡೆದುಕೊಳ್ಳುವಂತೆ ಪಡುಬಿದ್ರೆ ಪೊಲೀಸ್ ಠಾಣೆಯ ಎಸ್‍ಐ ಪ್ರಸನ್ನ ಮನವಿ ಮಾಡಿರು.

ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಪ್ರಯುಕ್ತ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯುಕ್ತ ಪಡುಬಿದ್ರಿ ಪಂಚಾಯತಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಮಾತನಾಡಿದರು.

ಪಡುಬಿದ್ರಿ ಪ್ರದೇಶವು ಕೈಗಾರಿಕರಣ ಚಟುವಟಿಕೆಯಿಂದಾಗಿ ಮುಂದುವರೆಯುತ್ತಿದೆ. ಈ ಪರಿಸರದಲ್ಲಿ ಅನೇಕ ಕಂಪನಿಗಳು ಇರುವುದರಿಂದ ಇಲ್ಲಿ ಕೆಲಸಕ್ಕಾಗಿ ಹೊರ ಜಿಲ್ಲೆ, ಹೊರ ರಾಜ್ಯ ದಿಂದ ಕಾರ್ಮಿಕರು ಬರುತ್ತಿದ್ದಾರೆ. ಅವರಿಗೆ ಕೆಲಸ ಕೊಡು ವಾಗ ಕಂಪೆನಿ ಮಾಲಕರು ಹಾಗೂ ಮನೆ ಬಾಡಿಗೆ ನೀಡುವಾಗ ಮನೆಯ ಯಜಮಾನರು ಕಡ್ಡಾಯವಾಗಿ ಅವರ ಆಧಾರ್ ಕಾರ್ಡ್ ಹಾಗೂ ಫೋಟೋ ಮತ್ತು ಮೊಬೈಲ್ ನಂಬರ್, ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್  ಪಡೆದು ಕೊಳ್ಳಬೇಕು. ಕಾರ್ಮಿಕರ ಸಂಶಯಸ್ಪದ ನಡವಳಿಕೆಗಳು ಕಂಡು ಬಂದರೆ ತಕ್ಷಣ ಸ್ಥಳೀಯ ಠಾಣೆಗೆ ಮಾಹಿತಿ ನೀಡಬೇಕು ಎಂದು ಅವರು ವಿವರಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News