×
Ad

ಮರಳು ಅಕ್ರಮ ಸಾಗಾಟ: ಇಬ್ಬರ ಸೆರೆ

Update: 2023-10-11 21:32 IST

ಮಂಗಳೂರು, ಅ.11: ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕಡೆಗೆ ಮಿನಿ ಟಿಪ್ಪರ್ ಲಾರಿಯಲ್ಲಿ ಮರಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಅಫ್ರಿದ್ ಮತ್ತು ಅಬ್ದುಲ್ ಸತ್ತಾರ್ ಎಂದು ಗುರುತಿಸಲಾಗಿದೆ.

ಮಂಗಳವಾರ ಪೂರ್ವಾಹ್ನ 11:55ರ ವೇಳೆಗೆ ಎಸ್ಸೈ ಹರೀಶ್ ತನ್ನಿಬ್ಬರು ಸಿಬ್ಬಂದಿಯ ಜೊತೆ ಗಸ್ತು ನಿರತರಾಗಿದ್ದ ವೇಳೆ ಕೊಟ್ಟಾರ ಚೌಕಿಯಿಂದ ಕೋಡಿಕಲ್ ಕಡೆಗೆ ತೆರಳುತ್ತಿದ್ದ ಮಿನಿ ಟಿಪ್ಪರ್ ಲಾರಿಯನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ 10 ಟನ್ ಮರಳನ್ನು ಆರೋಪಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಕಂಡು ಬಂತು. ತಕ್ಷಣ 11 ಸಾವಿರದ ಮೌಲ್ಯದ ಮರಳು ಮತ್ತು 5 ಲಕ್ಷ ರೂ. ಮೌಲ್ಯದ ಲಾರಿಯನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News