×
Ad

ದೇರಳಕಟ್ಟೆ : ಶಾಂತಿಭಾಗ್ ದಾರುಸ್ಸಲಾಂ ಜುಮಾ ಮಸೀದಿಯ ನೂತನ ಸಮಿತಿ ಅಸ್ತಿತ್ವಕ್ಕೆ

ಹಾಜಿ ಮಹಮ್ಮದ್ ಪರಪ್ಪು 10ನೇ ಬಾರಿ ಅಧ್ಯಕ್ಷರಾಗಿ ಆಯ್ಕೆ

Update: 2026-02-03 11:57 IST

ಉಳ್ಳಾಲ: ದೇರಳಕಟ್ಟೆಯ ಶಾಂತಿಭಾಗ್ ದಾರುಸ್ಸಲಾಂ ಜುಮಾ ಮಸೀದಿಯ 2026–27ನೇ ಸಾಲಿನ ಅಧ್ಯಕ್ಷರಾಗಿ ಹಾಜಿ ಮಹಮ್ಮದ್ ಪರಪ್ಪು ಅವರು ಸತತ 10ನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಮಹಮ್ಮದ್ ಕಮಾಲ್ ಅವರು 14ನೇ ಬಾರಿಗೆ ಮರು ಆಯ್ಕೆಯಾಗಿದ್ದು, ಕೋಶಾಧಿಕಾರಿಯಾಗಿ ಮಹಮ್ಮದ್ ಬೈತಾರ್ ಕಳೆದ 8 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಮಹಮ್ಮದ್ ಶರೀಫ್ ಅವರು 4ನೇ ಬಾರಿಗೆ ಮರು ಆಯ್ಕೆಯಾಗಿದ್ದಾರೆ. ಜೊತೆಗೆ ಸಹ ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಜಿ ಬಾವುಜಿ, ಹಾಜಿ ಅಬ್ದುಲ್ ಖಾದರ್, ಇಬ್ರಾಹಿಂ, ಸಲೀಮ್ ಸಾಹೇಬ್, ಸಯ್ಯದ್ ಹಮೀದ್, ಹಂಝ (ಶಾಂತಿ ಭಾಗ್), ಅಬೂಬಕ್ಕರ್, ಅಬ್ದುಲ್ ಲತೀಫ್, ಮೈದೀನ್ ಶರೀಫ್ ಹಾಗೂ ಅಬ್ದುಲ್ ಖಾದರ್ ಅವರನ್ನು ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News