ಕುಪ್ಪೆಪದವು: ಸಾರ್ವಜನಿಕ ರಕ್ತದಾನ ಶಿಬಿರ
Update: 2026-02-03 12:03 IST
ಮಂಗಳೂರು : ಬಡಜನ ಸೇವಾ ಫ್ರೆಂಡ್ಸ್ ಹಾಗೂ ಅಲ್-ಫತಹ್ ಫ್ರೆಂಡ್ಸ್ ಮತ್ತು ವಿವಿಧ ಸಂಘ–ಸಂಸ್ಥೆಗಳ ಜಂಟಿ ಆಶ್ರಯದಲ್ಲಿ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ.) ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ.) ಸಹಯೋಗದಲ್ಲಿ, ಫಾದರ್ ಮುಲ್ಲರ್ ಆಸ್ಪತ್ರೆ ಮಂಗಳೂರು ಅವರ ಸಹಭಾಗಿತ್ವದಲ್ಲಿ ಫೆಬ್ರವರಿ 1, 2026 (ಆದಿತ್ಯವಾರ)ರಂದು ಕಾವೇರಿ ವಿದ್ಯಾಲಯ, ಕುಪ್ಪೆಪದವಿನಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಯಶಸ್ವಿಯಾಗಿ ನಡೆಯಿತು.
ಶಿಬಿರದಲ್ಲಿ ಒಟ್ಟು 55 ಯುನಿಟ್ ರಕ್ತ ಸಂಗ್ರಹಿಸಲಾಯಿತು.
ಕಾರ್ಯಕ್ರಮದಲ್ಲಿ ಅರ್ಜುನ್ ಭಂಡಾರ್ಕರ್, ಗಿರೀಶ್ ಆಳ್ವ, ನಿಜಾಮ್ ತೋಕೂರು, ಪ್ರಕಾಶ್ ಕೆ., ಹಸನ್ ಭಾವ ಮಣಿಪಲ್ಲ, ನೌಷಾದ್ ಮುತ್ತೂರು, ಅಜೀಜ್ ನಡುಪಲ್ಲ, ಜೋಯ್ ಕುಟಿನ್ಹ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಸಂದೀಪ್ ಆಳ್ವ ಅವರು ನೆರವೇರಿಸಿದ್ದು, ಶಫೀಕ್ ಅವರು ವಂದಿಸಿದರು.