×
Ad

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಸಾಗಾಟದ ಚಿನ್ನ ವಶ

Update: 2023-10-22 21:34 IST

ಮಂಗಳೂರು, ಅ.22: ದುಬೈನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಶನಿವಾರ ವಶಪಡಿಸಿಕೊಂಡಿದ್ದಾರೆ.

ದುಬೈನಿಂದ ಇಂಡಿಗೋ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನಿಂದ 6,47,350 ರೂ. ಮೌಲ್ಯದ 107 ಗ್ರಾಂ ಪೇಸ್ಟ್ ರೂಪದ ಚಿನ್ನವನ್ನು ಡಬಲ್ ಲೇಯರ್ ಬಿಸ್ಕಿಟ್‌ಗಳ ಒಳಗೆ ಮತ್ತು ಚಾಕಲೇಟ್ ತುಂಬಿಸಿದ್ದ ರಟ್ಟಿನ ಬಾಕ್ಸ್‌ನ ಪದರಗಳ ಒಳಗಿಟ್ಟು ಸಾಗಿಸುತ್ತಿದ್ದ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News