ದ್ವೇಷ ಭಾಷಣ ಮಸೂದೆ ಜಾರಿಯಿಂದ ಅನಗತ್ಯ ಗೊಂದಲ: ಸುರಭಿ ಹೊದಿಗೆರೆ
ಮಂಗಳೂರು: ರಾಜ್ಯ ಸರ್ಕಾರ ದ್ವೇಷ ಭಾಷಣ ಮಸೂದೆ ಜಾರಿಗೆ ಮುಂದಾಗುವ ಮೂಲಕ ಅನಗತ್ಯ ಗೊಂದಕ್ಕೆ ಕಾರಣವಾಗುತ್ತಿದೆ. ಈ ಮಸೂದೆಯ ಪ್ರಸ್ತಾಪದ ಅಗತ್ಯವೇ ಇಲ್ಲ ರಾಜ್ಯ ಬಿಜೆಪಿ ವಕ್ತಾರೆ ಸುರಭಿ ಹೊದಿಗೆರೆ ಹೇಳಿದ್ದಾರೆ.
ಮಂಗಳೂರಿನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಒಂದು ವರ್ಗವನ್ನು ಟಾರ್ಗೆಟ್ ಮಾಡಲು ದ್ವೇಷ ಭಾಷಣ ಮಸೂದೆಯನ್ನು ಪ್ರಸ್ತಾಪಿಸಿದಂತಿದೆ. ಯಾವುದೇ ಒಂದು ಮಸೂದೆ ರೂಪಿಸುವ ಮುನ್ನ ಅದರ ಸಾಧಕ ಬಾಧಕಗಳ ಚರ್ಚೆಯಾಗಬೇಕು. ನುರಿತ ಕಾನೂನು ತಜ್ಞರು ಸೇರಿ ದಂತೆ ಸಂಬಂಧಪಟ್ಟ ಪ್ರಮುಖರೊಂದಿಗೆ ಸಮಗ್ರವಾಗಿ ಚರ್ಚೆಯಾಗಬೇಕು. ಆದರೆ ರಾಜ್ಯ ಸರ್ಕಾರ ಏಕಾಏಕಿ ಯಾಗಿ ಮಸೂದೆ ಜಾರಿಗೆ ಮುಂದಾಗಿದ್ದು, ಇದನ್ನು ತೀವ್ರವಾಗಿ ವಿರೋಧಿಸುವುದಾಗಿ ತಿಳಿಸಿದರು.
ದ್ವೇಷ ಭಾಷಣ ಮಸೂದೆ ಜಾರಿಯಾದರೆ ಪೊಲೀಸರು ಭಾಷಣಕಾರರ ಮೇಲೆ ನಿಗಾ ಇಟ್ಟು ಕಾರ್ಯಕ್ರಮಕ್ಕೆ ಮುನ್ನವೇ ಬಂಸುವ ಅವಕಾಶವಾಗಲಿದೆ. ಇದೇ ಕಾರಣದಿಂದ ಸರ್ಕಾರ ಈ ಮಸೂದೆ ಜಾರಿಗೆ ಮುಂದಾದಂತಿದೆ. ಈ ರೀತಿ ದುರುಪಯೋಗವಾಗುವ ಮಸೂದೆ ಯಾವುದೇ ಕಾರಣಕ್ಕೂ ಜಾರಿಯಾಗಬಾರದು ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಅರುಣ್ ಶೇಟ್, ಮಾಧ್ಯಮ ಪ್ರಮುಖ್ ವಸಂತ್ ಜೆ ಪೂಜಾರಿ, ಪ್ರಮುಖರಾದ ಮಾಧವ ಮಾವೆ, ಹೇಮಂತ ಶೆಟ್ಟಿ ದೇರಳಕಟ್ಟೆ ಉಪಸ್ಥಿತರಿದ್ದರು.