×
Ad

ಮಂಗಳೂರು ಕ್ರೆಡಾಯ್ ವಿಮೆನ್ಸ್ ವಿಂಗ್ ಉದ್ಘಾಟನೆ

Update: 2023-10-01 19:27 IST

ಮಂಗಳೂರು, ಅ.2: ಕಾನ್ಫೆಡರೇಶನ್ ಆಫ್ ರಿಯಲ್ ಎಸ್ಟೇಟ್ ಡೆವಲಪರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಕ್ರೆಡಾಯ್) ಮಂಗಳೂರು ವಿಭಾಗದ ಕ್ರೆಡಾಯ್ ಮಹಿಳಾ ವಿಭಾಗದ (ಸಿಡಬ್ಲ್ಯೂಡಬ್ಲ್ಯೂ) ಉದ್ಘಾಟನೆಯು ಮಂಗಳೂರಿನ ಓಶಿಯನ್ ಪರ್ಲ್‌ನಲ್ಲಿ ಸೆ.27 ನಡೆಯಿತು.

ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮಗಿಲನ್ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ರಿಯಲ್ ಎಸ್ಟೇಟ್‌ ನಲ್ಲಿ ಮಹಿಳೆಯರು ಸಬಲೀಕರಣದ ಕಡೆಗೆ ಹೆಜ್ಜೆ ಇರಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಅವರು ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಿದರು. ಕ್ರೆಡಾಯ್ ಮಂಗಳೂರು ವಿಭಾಗದ ಅಧ್ಯಕ್ಷ ವಿನೋದ್ ಪಿಂಟೊ ಅವರು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಮಹಿಳೆಯರ ಸಹಭಾಗಿತ್ವದ ಮಹತ್ವವನ್ನು ವಿವರಿಸಿದರು.

ಸಿಡಬ್ಲ್ಯೂಡಬ್ಲ್ಯೂರಾಷ್ಟ್ರೀಯ ಕಾರ್ಯದರ್ಶಿ ಸಾರಾ ಜೇಕಬ್ ಕ್ರೆಡಾಯ್ ಮಂಗಳೂರು ಮಹಿಳಾ ವಿಭಾಗದ ಪದಾಧಿಕಾರಿ ಗಳಿಗೆ ಪ್ರಮಾಣ ವಚನ ಬೋಧಿಸಿದರು. ರಜನಿ ಪತ್ರಾವೊ ಸಿಡಬ್ಲ್ಯೂಡಬ್ಲ್ಯೂಮಂಗಳೂರು ವಿಭಾಗದ ಕಾರ್ಯದರ್ಶಿಯಾಗಿ ಮತ್ತು ಕೃತೀನ್ ಅಮೀನ್ ಸಂಯೋಜಕಿ ಹುದ್ದೆಯನ್ನು ವಹಿಸಿಕೊಂಡರು. ಖಜಾಂಚಿ ಸುದೀಶ್ ಕರುಣಾಕರನ್ ಸ್ವಾಗತಿಸಿದರು, ರಜನಿ ಪತ್ರಾವೊ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News