ನ.13ರಂದು ಮಂಗಳೂರು ಮರೈನ್ ಕಾಲೇಜ್ ಆ್ಯಂಡ್ ಟೆಕ್ನೋಲಾಜಿ ನವೀಕೃತ ಕ್ಯಾಂಪಸ್ ಉದ್ಘಾಟನೆ
Update: 2025-11-11 20:02 IST
ಮಂಗಳೂರು, ನ.11: ಮಂಗಳೂರು ಮರೈನ್ ಕಾಲೇಜ್ ಆ್ಯಂಡ್ ಟೆಕ್ನೋಲಾಜಿ ಇದರ ನವೀಕೃತ ಕ್ಯಾಂಪಸ್‌ನ ಉದ್ಘಾಟನೆ ನ.13ರಂದು ನಡೆಯಲಿದೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಎಸ್.ಶ್ಯಾಮ್ ಸುಂದರ್ ಅವರು, ಕೇಂದ್ರ ಬಂದರು, ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನೊವಾಲ್ ಅವರು ನವೀಕೃತ ಕ್ಯಾಂಪಸ್‌ನ ಉದ್ಘಾಟನೆ ನೆರವೇರಿಸುವರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕೇಂದ್ರ ರಾಜ್ಯ ಸರಕಾರದ ಉನ್ನತ ಅಧಿಕಾರಿಗಳು ಭಾಗವಹಿಸಲಿದ್ದಾರೆಂದು ಮಾಹಿತಿ ನೀಡಿದರು.
2010 ರಲ್ಲಿ ಸ್ಥಾಪನೆಯಾದ ಮಂಗಳೂರು ಮರೈನ್ ಕಾಲೇಜ್ ಆ್ಯಂಡ್ ಟೆಕ್ನೋಲಾಜಿ (ಎಂಎಂಸಿಟಿ) ಕರ್ನಾಟಕದ ಮೊದಲ ಮತ್ತು ಏಕೈಕ ಡಿಜಿಎಸ್ -ಅನುಮೋದಿತ ಮರೈನ್ ಕಾಲೇಜು ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಜಾಗತಿಕ ಹಡಗು ಸಾಗಣೆ ಉದ್ಯಮಕ್ಕೆ ಸಮರ್ಥ ಸಾಗರ ವೃತ್ತಿಪರರನ್ನು ರೂಪಿಸಲು ಸಮರ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಶ್ರೀನಿವಾಸನ್ ಉಪಸ್ಥಿತರಿದ್ದರು.