×
Ad

ಪಂಪ್‌ವೆಲ್‌ನಲ್ಲಿ ಮುಹಿಮ್ಮಾತ್ ಪ್ರಚಾರ ಉದ್ಘಾಟನೆ ಹಾಗೂ ಹಿಮಮಿ ಸಂಗಮ

Update: 2025-12-24 09:14 IST

ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಇದರ ಸಂಸ್ಥಾಪಕರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್ ಹಾಗೂ ಮುಹಿಮ್ಮಾತ್ ಸನದು ದಾನ ಸಮ್ಮೇಳನ 2026 ಜನವರಿ 28 29 30 31 ರಂದು ನಡೆಯಲಿದ್ದು, ಇದರ ಪ್ರಚಾರ ಉದ್ಘಾಟನಾ ಸಮಾವೇಶ ಹಾಗೂ ಹಿಮಮೀಸ್ ಸಂಗಮವು 2025 ಡಿಸೆಂಬರ್ 23‌ ಮಂಗಳವಾರದಂದು ಮಂಗಳೂರು ಪಂಪ್ ವೆಲ್ ನ ಯುನಿಕ್ಸ್ ಬಿಲ್ಡಿಂಗ್ ನ DKC ಹಾಲ್ ನಲ್ಲಿ ನಡೆಯಿತು.

ಸಂಸ್ಥೆಯ ಉಪಾಧ್ಯಕ್ಷ ಸಯ್ಯಿದ್ ಹಸನುಲ್ ಅಹ್ದಲ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಹಿಮಮೀಸ್ ಕರ್ನಾಟಕ ಅಧ್ಯಕ್ಷ. ಸಯ್ಯಿದ್ ಷರಫುದ್ದೀನ್ ತಂಙಳ್ ಪರೀಧ್ ನಗರ ದುಆದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.

ಕೆಕೆಎಂ ಕಾಮಿಲ್ ಸಖಾಫಿ ಸ್ವಾಗತಿಸಿ‌, ಯೋಜನಾ ಸಮಿತಿ ಅಧ್ಯಕ್ಷ ಎಂಪಿಎಂ ಅಶ್ರಫ್ ಸ ಅದಿ ಮಲ್ಲೂರು ಪ್ರಾಸ್ತಾವಿಕ‌ವಾಗಿ ಮಾತಾಡಿದರು.

ಕೇರಳ‌ ಮುಸ್ಲಿಂ ‌ಜಮಾಅತ್ ಉಪಾಧ್ಯಕ್ಷ ರಾದ ಬಿ ಎಸ್ ಅಬ್ದುಲ್ಲ ಕುಂಞ ಫೈಝಿ ಉದ್ಘಾಟಿಸಿದರು. ಕಾರ್ಯದರ್ಶಿ ಮುನೀರ್ ತಂಙಳ್ ತ್ವಾಹಿರ್ ಅಹ್ದಲ್ ತಂಙಳ್ ಜೀವನದ ಬಗ್ಗೆ ವಿವರಿಸಿದರು.

ವೇದಿಕೆಯಲ್ಲಿ ಮುಹಿಮ್ಮಾತ್ ಗುರುಗಳಾದ ಅಬ್ದುರ್ರಹ್ಮಾನ್ ಅಹ್ಸನಿ,ಎಸ್ ವೈ ಎಸ್ ರಾಜ್ಯಾಧ್ಯಕ್ಷ ಬಷೀರ್ ಸಅದಿ ಪೀಣ್ಯ, ಮುಹಿಮ್ಮಾತ್ ನಿಂದ ಅಬ್ದುಲ್ ಖಾದರ್ ಸಖಾಫಿ ಮೊಗ್ರಾಲ್, ಮೂಸ ಸಖಾಫಿ‌ ಕಳತ್ತೂರು, ಅಬ್ದುಲ್ ಅಝೀಝ್ ಹಿಮಮಿ‌ ಗೋಸಾಡ, ಅಬ್ದುಲ್ ಖಾದರ್ ಜಲಾಲಿ, ಸಯ್ಯಿದ್ ಅಝ್ಹರ್ ತಂಙಳ್, ಹಾಜಿ ಅಮೀರ್ ಆಲಿ ಚೂರಿ, ಮುಹಮ್ಮದ್ ಅಶ್ರಫ್ ಸಖಾಫಿ ಉಳುವಾರ್,

ಎಸ್ ವೈಎಸ್ ಪ್ರ ಕಾರ್ಯದರ್ಶಿ ಕೆ ಎಮ್ ಸಿದ್ದೀಖ್ ಮೋಂಟುಗೋಳಿ, ಕರ್ನಾಟಕ ಯೋಜನಾ ಸಮಿತಿ ಕೋಶಾಧಿಕಾರಿ ಬದ್ರುದ್ದೀನ್ ಹಾಜಿ ಬಜಪೆ, ಉಪಾಧ್ಯಕ್ಷ ಇಸ್ಹಾಕ್ ಹಾಜಿ ಬೊಳ್ಳಾಯಿ ,ಸಲೀಂ ಕಣ್ಯಾಡಿ,ಸಲಾಂ ಮದನಿ ಗಡುಕಲ್ಲು, ಸಮೇತ ಹಲವಾರು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು.

ಹಿಮಮಿಗಳಿಗೆ ಮುಈಸುನ್ನ ಸಾರಥಿ ಕೆ ಎಂ ಮುಸ್ತಫಾ ನಈಮಿ ವಿಷಯ‌ ಮಂಡಿಸಿದರು. ಮುಹಿಮ್ಮಾತ್ ಕರ್ನಾಟಕ ಯೋಜನಾ ಸಮಿತಿ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಮಂಗಳೂರು ಮುಂದೆ ನಡೆಯುವ ಕನ್ವೇಷನ್ ಗಳ 10 ಕೇಂದ್ರಗಳ ಹೆಸರು ಹಾಗೂ ಟೀಮ್‌ನ್ನು ವಾಚಿಸಿದರು. ಕೆಕೆ ಅಶ್ರಫ್ ಸಖಾಫಿ ವಂದಿಸಿ ಸ್ವಲಾತ್ ನೊಂದಿಗೆ ಸಭೆ ಮುಕ್ತಾಯವಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News