×
Ad

ಯೆನೆಪೋಯ ದಂತ ಕಾಲೇಜಿನಲ್ಲಿ ಕಾರ್ಯಾಗಾರ ಉದ್ಘಾಟನೆ

Update: 2023-09-26 22:53 IST

ಕೊಣಾಜೆ: ಯೆನೆಪೋಯ ದಂತ ಕಾಲೇಜಿನ ವತಿಯಿಂದ "ರ್ಯಾಗಿಂಗ್ ಎಂಬುದು ಒಂದು ಪಿಡುಗು " ಎಂಬ ವಿಷಯದ ಕುರಿತ ಕಾರ್ಯಾಗಾರವು ಯೆನೆಪೋಯ ದಂತ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಎಸಿಪಿ ಗೀತಾ ಕುಲಕರ್ಣಿ ಅವರು ಕಾರ್ಯಕ್ರಮ ಉದ್ಘಾಟಿಸಿ ರ್ಯಾಗಿಂಗ್ ತಡೆಗಿರುವ ಕಾನೂನಾತ್ಮಕ ಕ್ರಮಗಳ ಬಗ್ಗೆ ವಿವರಿಸಿದರು.

ಡಿ ಸಿ ಐ, ಸದಸ್ಯರರಾದ ಗೀತಾ ಕುಲಕರ್ಣಿ‌ ಹಾಗೂ ಡಾ. ಶಿವ ಶರಣ್ ಶೆಟ್ಟಿ, ರ್ಯಾಗಿಂಗ್ ನ ಕೆಡುಕುಗಳ ಬಗ್ಗೆ ವಿವರಿಸಿದರು.

ಯೆನೆಪೋಯ ದಂತ ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮಿಕಾಂತ್ ಚಾತ್ರ ಕಾಲೇಜಿನಲ್ಲಿ ರ್ಯಾಗಿಂಗ್ ತಡೆಗೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಡೀನ್ ಡಾ. ಶ್ಯಾಮ್ ಸ್ವಾಗತಿಸಿದರು. ಡಾ. ಇಮ್ರಾನ್ ಮೋತಿಶಾಮ್ ಎಲ್ಲರಿಗೂ ವಂದಿಸಿದರು. ಎರಡನೇ ವರ್ಷದ ದಂತ ವೈದ್ಯ ವಿದ್ಯಾರ್ಥಿಗಳು ರಾಗಿ0ಗು ಕೆಡುಕಿನ ಬಗ್ಗೆ ಮೂಕಾಭಿನಯದ ಮೂಲಕ ಅರಿವು ಮೂಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News