×
Ad

ಮಂಗಳೂರು- ಬೆಂಗಳೂರು ನಡುವೆ ವಿಮಾನಗಳ ಸಂಚಾರ ಹೆಚ್ಚಳ

Update: 2023-09-04 23:07 IST

ಮಂಗಳೂರು: ದಿನಂಪ್ರತಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜಧಾನಿ ಬೆಂಗಳೂರಿಗೆ ಸಂಚರಿಸುವ ವಿಮಾನಗಳ ಸಂಖ್ಯೆ ಸೆಪ್ಟಂಬರ್ 7 ರಿಂದ ಹೆಚ್ಚಳವಾಗಲಿದೆ.

ಶನಿವಾರ ಆರು ಮತ್ತು ವಾರದ ಇತರ ಆರು ದಿನಗಳಲ್ಲಿ ದಿನಂಪ್ರತಿ ಐದು ವಿಮಾನಗಳು ಮಂಗಳೂರು- ಬೆಂಗಳೂರು ನಡುವೆ ಸಂಚರಿಸಲಿವೆ. ಪ್ರಸ್ತುತ ಇಂಡಿಗೋ ಸಂಸ್ಥೆಯು ವಾರದ ಎಲ್ಲ ದಿನಗಳಲ್ಲಿ ನಾಲ್ಕು ವಿಮಾನಗಳನ್ನು ನಿರ್ವಹಿಸುತ್ತಿವೆ. ಹೆಚ್ಚುವರಿ ವಿಮಾನ ಸೇವೆಯನ್ನು ಅಕ್ಟೋಬರ್ 28 ತನಕ ಒದಗಿಸಲು ಇಂಡಿಗೋ ತೀರ್ಮಾನಿಸಿದೆ.

ಇಂಡಿಗೋ ಸೆಪ್ಟೆಂಬರ್ 7 ರಿಂದ ವಿಮಾನ 6ಇ 6858 ಅನ್ನು ಮರು-ಪರಿಚಯಿಸುತ್ತಿದೆ. ಈ ವಿಮಾನವು ಮಂಗಳೂರಿಗೆ ಬೆಳಗ್ಗೆ 8.35 ಕ್ಕೆ ಆಗಮಿಸುತ್ತದೆ ಮತ್ತು 6ಇ 5347 ವಿಮಾನ 9.10 ಕ್ಕೆ ಬೆಂಗಳೂರಿಗೆ ಹೊರಡಲಿದೆ.

ವಿಮಾನ ನಿಲ್ದಾಣವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿಮಾನಗಳನ್ನು ಪ್ರಾರಂಭಿಸಲು ಇತರ ವಿಮಾನಯಾನ ಸಂಸ್ಥೆಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಸಕಾರಾತ್ಮಕ ಭಾವನೆಗಳನ್ನು ಪಡೆದುಕೊಂಡಿದೆ. ಅಕ್ಟೋಬರ್ 29 ರಿಂದ ಪ್ರಾರಂಭವಾಗುವ ಚಳಿಗಾಲದ ವೇಳಾಪಟ್ಟಿಯಲ್ಲಿ ಈ ಹೊಸ ವಿಮಾನಗಳು ಕಾರ್ಯರೂಪಕ್ಕೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News