ಕಿನ್ಯ ಮಿಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕೊಣಾಜೆ: ದೇರಳಕಟ್ಟೆ ಸಮೀಪದ ಕಿನ್ಯ ಮಿಂಪ್ರಿಯ ಅಂಗನವಾಡಿ ಕೇಂದ್ರದಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಕಿನ್ಯ ಗ್ರಾಪಂ ಅಧ್ಯಕ್ಷೆ ಮಾಲಿನಿ ಪೂಜಾರಿ ನೆರವೇರಿಸಿದರು.
ಕಿನ್ಯ ಗ್ರಾಪಂ ಉಪಾಧ್ಯಕ್ಷ ಫಾರೂಕ್ ಕಿನ್ಯ ಸಂದೇಶ ಭಾಷಣಗೈದರು.
ಕಾರ್ಯಕ್ರಮದಲ್ಲಿ ಕಿನ್ಯ ಮೂರನೇ ವಾರ್ಡಿನಲ್ಲಿ ಹಲವಾರು ವರ್ಷಗಳಿಂದ ಶೈಕ್ಷಣಿಕ, ಧಾರ್ಮಿಕ ಹಾಗೂ ಸಾಮಾಜಿಕ ರಂಗದಲ್ಲಿ ಸೇವೆ ಸಲ್ಲಿಸಿದ ರೇವತಿ ಟೀಚರ್, ಹಮೀದ್ ಮಿಂಪ್ರಿ, ಅಹ್ಮದ್ ಬಾವು ಪಡ್ಪು ಅವರನ್ನು ಗ್ರಾಪಂ 3ನೇ ವಾರ್ಡ್ ಸದಸ್ಯರ ವತಿಯಿಂದ ಸನ್ಮಾನಿಸಲಾಯಿತು.
ಮೂರನೇ ವಾರ್ಡಿನಲ್ಲಿ ಯುವಕರಿಗೆ ಏರ್ಪಡಿಸಲಾದ ಇಂಡಿಪೆಂಡೆನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು.
ಗ್ರಾಪಂ ಪಿಡಿಒ ತುಳಸಿ, ಕಿನ್ಯ ಗ್ರಾಪಂ ಸದಸ್ಯರಾದ ಸಯ್ಯದ್ ತ್ವಾಹ ತಂಳ್, ಬುಶ್ರಾ ಹನೀಫ್, ಮಿಂಪ್ರಿ ಮಸೀದಿಯ ಅಧ್ಯಕ್ಷ ಅಬ್ಬಾಸ್ ಮಿಂಪ್ರಿ, ಉಪಾಧ್ಯಕ್ಷ ಲತೀಫ್ ಮಿಂಪ್ರಿ, ಅಂಗನವಾಡಿ ಮೇಲ್ವಿಚಾರಕಿ ರೇವತಿ, ಆನಂದ್ ಮಿಂಪ್ರಿ ಉಪಸ್ಥಿತರಿದ್ದರು. ಆರಿಫ್ ಕಿನ್ಯ ವಂದಿಸಿದರು.