×
Ad

ಮಿಸ್ಬಾ ಸಮೂಹ ಶಿಕ್ಷಣ ಸಂಸ್ಥೆಗಳಿಂದ ಸ್ವಾತಂತ್ರ್ಯೋತ್ಸವದ ಸಂಭ್ರಮಾಚಾರಣೆ

Update: 2023-08-15 23:21 IST

ಸುರತ್ಕಲ್‌: ಮಿಸ್ಬಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ನಲ್ಲಿ ನಡೆದ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಮಾಜಿ ಶಾಸಕ ಮೊಯ್ದಿನ್‌ ಬಾವ ನೆರವೇರಿಸಿದರು.

ನೂರುಲ್ ಹುದಾ ಸಂಸ್ಥೆಯ ಅಧ್ಯಕ್ಷರಾದ ಬದ್ರುದ್ದೀನ್ ಮಾತನಾಡಿ, ನಮ್ಮ ದೇಶ ಸರ್ವ ಜನಾಂಗದ ಶಾಂತಿಯ ತೋಟ. ಈ ದೇಶದಲ್ಲಿ ಬೇರೆ ಬೇರೆ ಧರ್ಮದ ಜನರಿದ್ದಾರೆ. ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಜಾತಿ ಮತ ಭೇದ ಇಲ್ಲದೆ ಬದುಕಬೇಕು. ಈ ಮೂಲಕ ನಾವು ಮುಂದಿನ ಪೀಳಿಗೆಗೆ ಮಾದರಿಯಾಗಿರಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಅಲ್ ಹಾಜ್ ಬಿ.ಎಂ. ಮಮ್ತಾಝ್ ಅಲಿ, ಸಂಚಾಲಕರಾದ ಬಿ.ಎ. ನಝೀರ್‌, ಟ್ರಸ್ಟಿಗಳಾದ ನಾಸಿರ್ ಲಕ್ಕಿ ಸ್ಟಾರ್, ಹಕೀಮ್ ಫಾಲ್ಕನ್, ಫಕ್ರುದ್ದೀನ್ ಭಾವ, ಶರಿಯಾ ವಿಭಾಗದ ಮುಖ್ಯಸ್ಥರಾದ ಅಶ್ರಫ್ ಸಖಾಫಿ, ಹಬೀಬ್ ಸಕಾಫಿ, ಮಿಸ್ಬಾ ಪದವಿ ಪೂರ್ವ ವಿಭಾಗದ ಪ್ರಾಂಶುಪಾಲೆ ಮುಫಿದಾ ಮುಂತಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News