×
Ad

ಭಾರತದ ಹಾಕಿ ತಂಡದ ಸಾಧನೆ ಚೆನ್ನಾಗಿದೆ: ಭಾರತದ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ

Update: 2025-10-12 20:45 IST

ಮಂಗಳೂರು: ಭಾರತದ ಹಾಕಿ ತಂಡದ ಈಗಿನ ಸಾಧನೆ ಉತ್ತಮವಾಗಿದೆ. ನವೆಂಬರ್ 7ರಂದು ಶತಮಾನೋತ್ಸವ ವರ್ಷಾಚರಣೆಗೆ ಕಾಲಿಡಲಿದ್ದು, ಈ ಸಂದರ್ಭದಲ್ಲಿ ಭಾರತದ ಸುಮಾರು 1,000- 2,000 ಅಧಿಕ ಕ್ರೀಡಾಂಗಣಗಳಲ್ಲಿ ಮಕ್ಕಳಿಂದ ಪ್ರದರ್ಶನ ಪಂದ್ಯಗಳು ನಡೆಯಲಿದೆ. ಹಾಕಿ ದಂತಕತೆ ಮೇಜರ್ ಧ್ಯಾನ್ ಚಂದ್ ಅವರ ಪರಂಪರೆಯನ್ನು ಭಾರತದ ಹಾಕಿ ತಂಡದ ನಾಯಕ ಹರ್ಮನ್ ಪ್ರೀತ್ ಸಿಂಗ್ ಮುಂದುವರಿಸುತ್ತಿದ್ದಾರೆ ಎಂದು ಭಾರತದ ಹಾಕಿ ತಂಡದ ಮಾಜಿ ನಾಯಕ ಧನರಾಜ್ ಪಿಳ್ಳೈ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಭಾರತದ ಹಾಕಿ ತಂಡ ಕಳೆದ 10 ಜಗತ್ತಿನ ಶ್ರೇಷ್ಠ ತಂಡಗಳನ್ನು ಮಣಿಸುವಷ್ಟು ಶಕ್ತಿಯುತವಾಗಿ ರೂಪುಗೊಂಡಿದೆ. ಆಸ್ತ್ರೇಲಿಯ, ಜರ್ಮನಿ, ನೆದರ್‌ಲ್ಯಾಂಡ್, ಬೆಲ್ಜಿಯಂ, ಅರ್ಜೆಂಟೀನ ಮತ್ತಿತರ ತಂಡಗಳನ್ನು ಮಣಿಸುವ ಸಾಮರ್ಥ್ಯ ಹೊಂದಿದೆ. ಪಂದ್ಯದಲ್ಲಿ ಕೊನೆಯ ತನಕ ಭಾರತದ ಹಾಕಿ ತಂಡ ಗೆಲುವಿಗೆ ಮತ್ತು ಡ್ರಾ ಸಾಧಿಸಲು ಹೋರಾಡುತ್ತಿದೆ ಎಂದು ತಂಡದ ಸಾಮರ್ಥ್ಯವನ್ನು ಶ್ಲಾಘಿಸಿದರು.

ಹಾಕಿ ಇಂಡಿಯಾ ಭಾರತದ ಹಾಕಿ ಆಟಗಾರರಿಗೆ ಪ್ರೋತ್ಸಾಹ ನೀಡುತ್ತಿದೆ. ರಾಜ್ಯ ಸರಕಾರಗಳು ಪ್ರೋತ್ಸಾಹ ನೀಡುತ್ತಿದೆ. ಏಶ್ಯ ಕಪ್ ಚಾಂಪಿಯನ್ ಭಾರತ ತಂಡದ ಆಟಗಾರರಿಗೆ, ಸಪೋರ್ಟ್ ಸ್ಟಾಪ್‌ಗೆ ತಲಾ 10 ಲಕ್ಷ ರೂ. ಗಳನ್ನು ನೀಡಿತ್ತು ಎಂದರು.

ಕಳೆದ 15 ವರ್ಷಗಳಲ್ಲಿ ಭಾರತ ಸರಕಾರವು ಕ್ರೀಡಾ ಕ್ಷೇತ್ರಕ್ಕೆ ಉತ್ತಮ ಪ್ರೋತ್ಸಾಹ ನೀಡುತ್ತಿದೆ. ಹಾಕಿ ಇಂಡಿಯಾ ಲೀಗ್ ಇದರಿಂದಾಗಿ ಆರಂಭಗೊಂಡಿತು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News