×
Ad

ಅರುಣ್ ಪುತ್ತಿಲ ಬಗ್ಗೆ ಮಾನಹಾನಿಕಾರಕ ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ

Update: 2024-08-30 19:20 IST

ಅರುಣ್ ಪುತ್ತಿಲ

ಪುತ್ತೂರು: ತನ್ನ ವಿರುದ್ದ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ.

ಅರುಣ್ ಪುತ್ತಿಲ ಅವರ ಬಗ್ಗೆ ಯಾವುದೇ ಮಾನ ಹಾನಿಕಾರಕ ವರದಿ ಪ್ರಕಟಿಸದಂತೆ ಬೆಂಗಳೂರಿನ 7ನೇ ಹೆಚ್ಚುವರಿ ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ವಿಧಿಸಿದೆ.

ಅರುಣ್ ಕುಮಾರ್ ಪುತ್ತಿಲ ಯುವತಿಯೊಂದಿಗೆ ಮಾತನಾಡಿದ್ದರು ಎನ್ನಲಾಗಿದ್ದ ಆಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಡಲಾಗಿತ್ತು. ಈ ಆಡಿಯೋ ಬಗ್ಗೆ ಸಾಕಷ್ಟು ಪರ ಮತ್ತು ವಿರೋಧ ಚರ್ಚೆಗಳು ನಡೆದಿತ್ತು. ಇದರಿಂದಾಗಿ ಅರುಣ್ ಪುತ್ತಿಲ ಅವರು ತಮ್ಮ ವಿರುದ್ಧ ಮಾನಹಾನಿಕರ ವರದಿ ಪ್ರಕಟಿಸದಂತೆ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟು ಪುತ್ತಿಲ ಅವರ ಬಗ್ಗೆ ಯಾವುದೇ ಮಾನ ಹಾನಿಕಾರಕ ವಿಷಯ, ಸುದ್ದಿ, ಲೇಖನ, ಪ್ರಕಟಣೆಗಳು, ಸಂಭಾಷಣೆ ಯನ್ನು ಒಳಗೊಂಡಿರುವ ಹಾನಿ ಉಂಟು ಮಾಡುವ ವಿಷಯಗಳನ್ನು ಪ್ರಸಾರ ಮಾಡುವುದನ್ನು ನಿರ್ಭಂಧಿಸಿ ಆದೇಶ ಹೊರಡಿಸಿದೆ.

ವೈರಲ್ ಆಗಿರುವ ಆಡಿಯೋದ ಬಗ್ಗೆ ಈ ಹಿಂದೆ ಪತ್ರಿಕಾ ಹೇಳಿಕೆ ನೀಡಿದ್ದ ಅರುಣ್ ಪುತ್ತಿಲ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದ್ದು, ತಾನು ಕಾನೂನು ಚೌಕಟ್ಟಿನಲ್ಲಿ ಮುಂದುವರಿಯುವುದಾಗಿ ತಿಳಿಸಿದ್ದರು. ಇದೀಗ ತನ್ನ ವಿರುದ್ದ ಪ್ರಚಾರ ನಡೆಸದಂತೆ ನ್ಯಾಯಾಲಯದ ಮೂಲಕ ತಡೆಯಾಜ್ಞೆ ತಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News