×
Ad

ದಕ್ಷಿಣ ಕೋರಿಯಾದಲ್ಲಿ ಅಂತಾರಾಷ್ಟ್ರೀಯ ಜಾಂಬೂರಿ: ಮಂಗಳೂರಿನ ಪಿಯು ವಿದ್ಯಾರ್ಥಿನಿ ರೆಚೆಲ್ ಅನಿಶಾ ಕ್ರಾಸ್ತಾ ಪ್ರತಿನಿಧಿ

Update: 2023-07-29 22:36 IST

ಮಂಗಳೂರು : ದಕ್ಷಿಣ ಕೋರಿಯಾದಲ್ಲಿ ಆ.1ರಿಂದ 12ರವರೆಗೆ ನಡೆಯಲಿರುವ 25ನೇ ಅಂತಾರಾಷ್ಟ್ರೀಯ ಜಾಂಬೂರಿ ಕಾರ್ಯಕ್ರಮದಲ್ಲಿ ಮಂಗಳೂರಿನ ಸಂತ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ರೆಚೆಲ್ ಅನಿಶಾ ಕ್ರಾಸ್ತಾ ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.

2020-21 ಸಾಲಿನಲ್ಲಿ ಸ್ಕೌಟ್ಸ್ ಗೈಡ್ಸ್ ರಾಜ್ಯ ಪುರಸ್ಕಾರವನ್ನು ಪಡೆದಿರುವ ರೆಚೆಲ್ ಕ್ರಾಸ್ತಾ ವಾಮಂಜೂರಿನ ರೋಶನ್ ಮತ್ತು ಲವೀನಾ ಕ್ರಾಸ್ತಾ ದಂಪತಿಯ ಪುತ್ರಿ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News