×
Ad

ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗದಿಂದ ಲೇಖನ ಸ್ಪರ್ಧೆಗೆ ಆಹ್ವಾನ

Update: 2024-09-03 22:10 IST

ಸಾಂದರ್ಭಿಕ ಚಿತ್ರ

ಮಂಗಳೂರು, ಸೆ.3: ನೈತಿಕತೆಯೇ ಸ್ವಾತಂತ್ರ್ಯ ಎಂಬ ಆಶಯದಡಿ ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ವಿಭಾಗವು ಸೆ.30 ರವರೆಗೆ ರಾಷ್ಟ್ರವ್ಯಾಪಿ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ಮಹಿಳಾ ವಿಭಾಗವು ಮಂಗಳೂರು ನಗರಮಟ್ಟದಲ್ಲಿ ಸಾರ್ವಜನಿಕರಿಗೆ ಲೇಖನ ಸ್ಪರ್ಧೆಯನ್ನು ಆಯೋಜಿಸಿದೆ.

30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಹಾಗೂ 30 ವರ್ಷಕ್ಕಿಂತ ಕೆಳಗಿನ ಮಹಿಳೆಯರು ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ನಡೆಯಲಿದೆ. ಬರಹ ಎ4 ಸೈಜ್‌ನ ಮೂರು ಪುಟಗಳಿಗೆ ಸೀಮಿತವಾಗಿ ರಬೇಕು. ಪ್ರಥಮ ಬಹುಮಾನ 3,000 ರೂ., ದ್ವಿತೀಯ ಬಹುಮಾನ 2,000 ರೂ., ತೃತೀಯ ಬಹುಮಾನ 1,000 ರೂ. ನೀಡಲಾಗುವುದು. ಬರಹದೊಂದಿಗೆ ಹೆಸರು, ಜನ್ಮ ದಿನಾಂಕವನ್ನು ನಮೂದಿಸಬೇಕು. ಲೇಖನ ಸ್ಪರ್ಧೆ ವಿಭಾಗ, ಹಿದಾಯತ್ ಸೆಂಟರ್, ಬೀಬಿ ಅಲಾಬಿ ರೋಡ್, ಬಂದರ್, ಮಂಗಳೂರು ಈ ವಿಳಾಸಕ್ಕೆ ಸೆ.21ರೊಳಗೆ ಲೇಖನ ಕಳುಹಿಸಬೇಕು. ಸಾಫ್ಟ್ ಕಾಪಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News