×
Ad

ಅಖಿಲ ಭಾರತ ಬ್ಯಾರಿ ಪರಿಷತ್‌ನಿಂದ ವಿವಿಧ ಸ್ಪರ್ಧೆಗಳಿಗೆ ಆಹ್ವಾನ

Update: 2025-09-19 21:08 IST

ಮಂಗಳೂರು, ಸೆ.19: ಅಖಿಲ ಭಾರತ ಬ್ಯಾರಿ ಪರಿಷತ್ (ರಿ) ಕೇಂದ್ರೀಯ ಸಮಿತಿ ಮಂಗಳೂರು ಇದರ ವತಿಯಿಂದ ಅಕ್ಟೋಬರ್‌ನಲ್ಲಿ ನಡೆಯಲಿರುವ ಬ್ಯಾರಿ ಭಾಷಾ ದಿನಾಚರಣೆಯ ಅಂಗವಾಗಿ ಜೂನಿಯರ್ ವಿಭಾಗದಲ್ಲಿ ಹೈಸ್ಕೂಲ್ ಹಾಗೂ ಕಾಲೇಜು ವಿದ್ಯಾರ್ಥಿ ಗಳಿಗೆ, ಸೀನಿಯರ್ ವಿಭಾಗದಲ್ಲಿ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು ಎಂದು ಪರಿಷತ್ ಅಧ್ಯಕ್ಷ ಯು. ಎಚ್. ಖಾಲಿದ್ ಉಜಿರೆ ತಿಳಿಸಿದ್ದಾರೆ.

ಬ್ಯಾರಿ ಆಶು ಭಾಷಣ ಸ್ಪರ್ಧೆ, ಬ್ಯಾರಿ ಒಗಟು, ಬ್ಯಾರಿ ಪ್ರಬಂಧ ಸ್ಪರ್ಧೆ, ಬ್ಯಾರಿ ಗಾಯನ ಸ್ಪರ್ಧೆ ಹಾಗೂ ವಿಷಯಾ ಧಾರಿತ ಭಾಷಣ ಸ್ಪರ್ಧೆಗಳನ್ನು ಸೆ.25ರಂದು ಮಧ್ಯಾಹ್ನ 2:30ಕ್ಕೆ ನಗರದ ನ್ಯಾಷನಲ್ ಟ್ಯೂಟೋರಿಯಲ್ ಸಭಾಂಗಣದಲ್ಲಿ ನಡೆಸಲಾಗುವುದು. ವಿಜೇತರಿಗೆ ಭಾಷಾ ದಿನಾಚರಣೆಯಂದು ನಗದು ಬಹುಮಾನ ಪ್ರಥಮ 1,000 ರೂ. ದ್ವಿತೀಯ 750 ರೂ., ತೃತೀಯ 500 ರೂ ವಿತರಿಸಿ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು. ಭಾಷಾ ದಿನಾಚರಣೆಯ ದಿನಾಂಕ ಮತ್ತು ಸ್ಥಳವನ್ನು ಮುಂದೆ ತಿಳಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಚಿಸುವವರು ಸೆ.24ರ ಸಂಜೆ 5ಗಂಟೆಯೊಳಗೆ ಹೆಸರನ್ನು ನೋಂದಾಯಿಸಲು ಹಾಗೂ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಲು ಪರಿಷತ್ ಪ್ರಧಾನ ಕಾರ್ಯದರ್ಶಿ ವಿಇಬ್ರಾಹಿಂ ನಡುಪದವು (9448620793), ಜೊತೆ ಕಾರ್ಯದರ್ಶಿ ಶೌಕತ್ ಇಕ್ಬಾಲ್ (8123400004) ಅವರನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News