×
Ad

ದೆಹಲಿಯ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಪುತ್ತೂರಿನ ಕುಂಬಾರರ ಗುಡಿಕೈಗಾರಿಕಾ ಸಂಘದ ಅಧ್ಯಕ್ಷಗೆ ಅಹ್ವಾನ

Update: 2023-08-13 21:59 IST

ಭಾಸ್ಕರ ಪೆರುವಾಯಿ

ಪುತ್ತೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರೋತ್ಸವದ ಪೆರೇಡ್‍ ನಲ್ಲಿ ಹಾಗೂ ಪ್ರಧಾನ ಮಂತ್ರಿ ವಿಕಾಸ್ ಯೋಜನೆಯ ಅನಾವರಣ ಕಾರ್ಯಕ್ರಮಕ್ಕೆ ಭಾರತ ಸರ್ಕಾರದ ವತಿ ಯಿಂದ ಗ್ರಾಮೀಣ ಕುಂಬಾರಿಕೆಯ ಬಗ್ಗೆ ಕಾರ್ಯ ನಿರ್ವಹಿಸುತ್ತಿರುವ ಕುಂಬಾರರ ಗುಡಿಕೈಗಾರಿಕಾ ಸಹಕಾರ ಸಂಘವನ್ನು ಗುರುತಿಸಿ ಕೇಂದ್ರೆ ಸರ್ಕಾರ ಅವಕಾಶ ಕಲ್ಪಿಸಿದೆ.

ಕುಂಬಾರಿಕೆಯನ್ನು ಗುರುತಿಸಿ ಕೇಂದ್ರ ಸರ್ಕಾಋ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ದೆಹಲಿಗೆ ಆಹ್ವಾನಿ ಸಿದೆ. ಪುತ್ತೂರು ಕುಂಬಾರರ ಗುಡಿಕೈಗಾರಿಕೆ ಸಹಕಾರ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ ಅವರು ದೆಹಲಿಯಲ್ಲಿ ನಡೆಯ ಲಿರುವ ಪೆರೇಡ್ ಮತ್ತು ಪ್ರಧಾನ ಮಂತ್ರಿ ವಿಕಾಸ್ ಯೋಜನೆಯ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News