ರೋಗಿಗೆ ಮಾನಸಿಕಸ್ಥೈರ್ಯ ನೀಡಿ ಆರೈಕೆ ನೀಡುವುದು ಮುಖ್ಯ: ಡಾ.ಶಿವಕುಮಾರ್
ಮಂಗಳೂರು, ಜು.7;ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸವಾಲಿದೆ. ಈ ನಡುವೆ ರೋಗಿಗೆ ಮಾನಸಿಕ ಸ್ಥೈರ್ಯ ನೀಡಿ ರೋಗಿಯ ಆರೈಕೆ ಮಾಡುವುದು ಮುಖ್ಯ ಎಂದು ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕ,ವೆನ್ಲಾಕ್ ಆವರಣದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಾಕಷ್ಟು ಚಿಕಿತ್ಸೆಗೆ ವೈದ್ಯರು ಮತ್ತು ರೋಗಿಯ ನಡುವಿನ ಸಂವಹನ ಮುಖ್ಯ ಎಂದು ಡಾ.ಶಿವಕುಮಾರ್ ತಿಳಿಸಿದ್ದಾರೆ.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್ ಮಾತನಾಡುತ್ತಾ,ವೈದ್ಯರ ಮೇಲೆ ನಂಬಿಕೆ ಮುಖ್ಯ. ಸಮಾಜದ ಹಿತ ಚಿಂತನೆಯೊಂದಿಗೆ ವೈದ್ಯಕೀಯ ಸೇವೆ ಇಂದಿನ ಅಗತ್ಯವಿದೆ ಎಂದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ.ಮುಹಮ್ಮದ್ ಇಕ್ಬಾಲ್ ಸ್ವಾಗತಿಸಿದರು.
ಡಾ.ದೇವದಾಸ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಸಮಾರಂಭದ ವೇದಿಕೆಯಲ್ಲಿ ಹಿರಿಯ ವೈದ್ಯಡಾ.ಪ್ರದೀಪ್ ಮಾಹಿತಿ ನೀಡಿದರು.
ಆಯುಷ್ ವೈದ್ಯಕೀಯ ಅಧೀಕ್ಷಕ ಡಾ. ಜಾಹಿದ್ ಹುಸೈನ್ ,ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ,ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮೊದಲಾದ ವರು ಉಪಸ್ಥಿತರಿದ್ದರು.ಡಾ.ಶೋಭಾರಾಣಿ ಮತ್ತು ಡಾ.ಸಹನಾ ಪಿ.ವಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸರಕಾರಿ ಆಯುಷ್ ವೈದಾಧಿಕಾರಿಗಳ ಸಂಘದ ಅಧ್ಯಕ್ಷ ಡಾ.ಮುರಳೀಧರ್ ವಂದಿಸಿದರು.