ಸಿಎಂ ಸಿದ್ದರಾಮಯ್ಯಗೆ ಕ್ರಿಸ್‌ಮಸ್ ಶುಭಾಶಯ ಕೋರಿದ ಐವನ್ ಡಿಸೋಜಾ
Update: 2025-12-19 22:22 IST
ಮಂಗಳೂರು: ನಾಡಿನ ಸಮಸ್ತ ಕ್ರೈಸ್ತ ಸಮುದಾಯದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ರೈಸ್ತ ನಾಯಕರು ಹಾಗೂ ವಿಧಾನ ಪರಿಷತ್‌ನ ಶಾಸಕ ಐವನ್ ಡಿಸೋಜಾ ಕ್ರಿಸ್‌ಮಸ್ ಶುಭಾಶಯ ಕೋರಿದರು.
ಕರಾವಳಿ ಕರ್ನಾಟಕದಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಸಿದ್ಧಪಡಿಸಲಾದ ಕೇಕ್, ನ್ಯೂರಿ, ಕುಕ್ಕೀಸ್, ಕಿಡಿಯೋ, ಅಕ್ಕಿಲಡ್ಡು, ಖಾದ್ಯ ತಿಂಡಿ ತಿನಿಸುಗಳ ಜತೆಗೆ ಕ್ರಿಸ್‌ಮಸ್ ಟೋಪಿ ನೀಡಿ ಶುಭಾಶಯ ಕೋರಲಾಯಿತು.
ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಎಲ್ಲಾ ಜನತೆಗೆ ಕ್ರಿಸ್‌ಮಸ್ ಹಬ್ಬ ಶಾಂತಿ ಸೌಹಾರ್ದತೆಯಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಕಾಂಗ್ರೆಸ್ ನಾಯಕರಾದ ವಿಜಯ ಬೈಕಂಪಾಡಿ, ಕ್ರೈಸ್ತ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಎಸ್. ಚಿನ್ನಪ್ಪ ಮತ್ತು ಸಿರಿಲ್ ಡಿಸೋಜಾ ಉಪಸ್ಥಿತರಿದ್ದರು.