×
Ad

ಜಾಲ್ಸೂರು: ಮನೆ ಬಾಗಿಲು ಮುರಿದು ಹಾಡುಹಗಲೇ ಕಳವು

Update: 2023-09-12 19:52 IST

ಸುಳ್ಯ: ಹಾಡುಹಗಲೇ ಮನೆಯ ಹಿಂಬದಿಯ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳವುಗೈದ ಘಟನೆ ಜಾಲ್ಸೂರು ಗ್ರಾಮದ ಕದಿಕಡ್ಕ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ.

ಕದಿಕಡ್ಕದ ವಸಂತ ರೈ ಎಂಬವರ ಮನೆಯಿಂದ ಚಿನ್ನಾಭರಣ ಹಾಗೂ ನಗದು ಕಳವಾಗಿದ್ದು, ವಸಂತ ಅವರ ಪತ್ನಿ ಹಾಗೂ ಮಕ್ಕಳು ಕೆಲಸದ ನಿಮಿತ್ತ ಬೆಳಿಗ್ಗೆ ಮನೆಗೆ ಬಾಗಿಲು ಹಾಕಿ ತೆರಳಿದ್ದರು. ಮಧ್ಯಾಹ್ನ ವೇಳೆಗೆ ಮನೆಗೆ ಊಟಕ್ಕೆ ಬಂದ ಸಂದರ್ಭದಲ್ಲಿ ಮನೆಯ ಹಿಂಬದಿಯಿಂದ ಬಾಗಿಲು ಮುರಿದಿದ್ದು, ಮನೆಯ ಒಳಗೆ ಎರಡು ಗೋಡ್ರೆಜ್‍ನ ಲಾಕ್ ಮುರಿದಿದ್ದು, ಒಳಗಿದ್ದ ವಸಂತ ರೈ ಅವರ ಪತ್ನಿಯ ಕರಿಮಣಿ, ಚಿನ್ನದ ಸರ ಹಾಗೂ ಎರಡು ಉಂಗುರ ಹಾಗೂ ಗೋಡ್ರೆಜ್ ಒಳಗಿದ್ದ ನಗದು ಕಳವು ಆಗಿತ್ತು.

ಚಿನ್ನಾಭರಣ ಹಾಗೂ ನಗದು ಕಳವಿಗೆ ಸಂಬಂಧಿಸಿದಂತೆ ಪೊಲೀಸ್ ಪರಿಶೀಲನೆ ವೇಳೆಗೆ ಕಳವಾಗಿದ್ದ ಚಿನ್ನಾಭರಣ ಕಳ್ಳರು ಗೋಡ್ರೆಜ್ ಒಳಗಿನಿಂದ ಎಳೆದು ಹಾಕಿದ್ದ ಸೀರೆಯ ರಾಶಿಯಲ್ಲಿ ಪತ್ತೆಯಾಗಿದ್ದು, ನಗದು ಮಾತ್ರ ಕಳವಾಗಿದೆ.

ತನಿಖಾ ಎಸ್.ಐ. ಸರಸ್ವತಿ ಮತ್ತು ಸುಳ್ಯ ಎಸ್.ಐ. ಈರಯ್ಯ ದೂಂತೂರು ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಕಳವಾಗಿದ್ದ ಚಿನ್ನಾಭರಣವಾದ ಕರಿಮಣಿ, ಚಿನ್ನದ ಸರ ಹಾಗೂ ಎರಡು ಚಿನ್ನದ ಉಂಗುರ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಸೀರೆಯ ರಾಶಿಯಲ್ಲಿ ಪತ್ತೆಯಾಗಿದ್ದು, ಐದರಿಂದ ಎಂಟು ಸಾವಿರ ರೂ. ನಗದು ಮಾತ್ರ ಕಳವಾಗಿದೆ

ಚಿನ್ನಾಭರಣ ಬಟ್ಟೆಯ ಜೊತೆಗೆ ನೆಲದಲ್ಲಿ ಬಿದ್ದಿತ್ತು. ಕಳವಾಗಿದೆ ಎನ್ನಲಾದ ಚಿನ್ನಾಭರಣ ಪತ್ತೆಯಾಗಿದ್ದು, ಮನೆಯ ಇನ್ನೊಂದು ಕೊಠಡಿಯಲ್ಲಿದ್ದ ಗೋಡ್ರೆಜ್ ಒಡೆದ ಕಳ್ಳರು ಐದರಿಂದ ಎಂಟು ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ.

ಈ ಬಗ್ಗೆ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬೆರಳಚ್ಚು ತಜ್ಞರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News