×
Ad

ಸಿರಿಧಾನ್ಯ ಬಳಕೆಯಿಂದ ಆರೋಗ್ಯಯುತ ಜೀವನ: ಜಯರಾಮ್

Update: 2026-01-07 20:00 IST

ಮಂಗಳೂರು: ಸಿರಿಧಾನ್ಯಗಳಿಂದ ತಯಾರಿಸಲ್ಪಡುವ ವಿಭಿನ್ನರೀತಿಯ ಖಾದ್ಯಗಳಿಂದ ಆರೋಗ್ಯಯುತ ಜೀವನ ಶೈಲಿ ನಮ್ಮದಾಗಿಸಿಕೊಳ್ಳಬಹುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ಯೋಜನಾ ನಿರ್ದೇಶಕ ಜಯರಾಮ್ ಹೇಳಿದ್ದಾರೆ.

ನಗರದ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಸಿರಿಧಾನ್ಯಗಳಿಂದ ವಿವಿಧ ಖಾದ್ಯಗಳನ್ನು ತಯಾರಿಸಬಹುದು. ಇದು ಉತ್ತಮ ಆರೋಗ್ಯಕ್ಕೆ ಉಪಯುಕ್ತವಾದ ಆಹಾರಗಳು. ಸಿರಿಧಾನ್ಯಗಳನ್ನು ಬೆಳೆಯುವುದರಿಂದ ನೀರಿನ ಉಳಿತಾಯದ ಜೊತೆಗೆ ಮನುಷ್ಯರಿಗೂ, ಜಾನುವಾರುಗಳಿಗೂ ಹಾಗೂ ಪರಿಸರ ಸಂರಕ್ಷಣೆಗೆ ಉಪಯುಕ್ತ ಎಂದು ಅವರು ಹೇಳಿದರು.

ಜಂಟಿ ಕೃಷಿ ನಿರ್ದೇಶಕ ಹೊನ್ನಪ್ಪಗೋವಿಂದಗೌಡ ಮಾತನಾಡಿ, ಹಿಂದಿನ ಕಾಲದ ನಮ್ಮ ಹಿರಿಯರ ಆಹಾರ ಪದ್ಧತಿಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ಅನುಷ್ಠ್ಠಾನಗೊಳಿಸಲಾಗುತ್ತದೆ ಎಂದು ಹೇಳಿದರು.

ಉಪ ಕೃಷಿ ನಿರ್ದೇಶಕ ಅಶೋಕ, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ, ಸಹಾಯಕ ಕೃಷಿ ನಿರ್ದೇಶಕಿ ವೀಣಾಕೆ.ಆರ್‌ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಆಹಾರ ವಿಜ್ಞಾನಿ ಡಾ. ಫಝಲ್ ಎ.ಎ, ಉಳ್ಳಾಲ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ೇಂದ್ರದ ಪ್ರಾಧ್ಯಾಪಕ ಡಾ. ಮಾರುತೇಶ್ ಎ.ಎಂ, ಡಾ. ನಿಟ್ಟೆ ವಿಶ್ವವಿದ್ಯಾಲಯದ ಆಹಾರ ಸುರಕ್ಷತೆ ಮತ್ತು ಪೋಷಕಾಂಶ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಮತ ಬಿ.ಎಸ್‌ಅವರು ಪಾಲ್ಗೊಂಡಿದ್ದರು.

ರುಚಿಕರಖಾದ್ಯ- ಆಕರ್ಷಕ ತಿನಿಸುಗಳು :ಈ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 51 ಮಂದಿ ಭಾಗವಹಿಸಿದ್ದರು. ಮರೆತುಹೋದ ಖಾದ್ಯ ವಿಭಾಗದಲ್ಲಿ ಒಟ್ಟು 10 ಮಂದಿ, ಸಿರಿಧಾನ್ಯ ಖಾರ ವಿಭಾಗದಲ್ಲಿ ಒಟ್ಟು 17 , ಸಿರಿಧಾನ್ಯ ಸಿಹಿ ವಿಭಾಗದಲ್ಲಿ ಒಟ್ಟು 24 ಮಂದಿ ಭಾಗವಹಿಸಿ ವಿವಿಧ ಖಾದ್ಯಗಳಾದ ಕಜೆ ಲಡ್ಡು, ಪತ್ರೊಡೆ, ತುಳುವಿನಲ್ಲಿ ಕರೆಯಲ್ಪುಡುವ ನಾಣಿಲ್, ಒಲ್ಲೆದಕೊಡಿ, ತೇರೆದಕೊಡಿ ವಿವಿಧ ಬಗೆಯ ಕಾಡು ಸೊಪ್ಪಿನ ಚಟ್ನಿಗಳು, ರಾಗಿ ಲಡ್ಡು, ಜೋಳದ ರೊಟ್ಟಿ, ನವಣೆ ಉಪ್ಪಿಟ್ಟು, ನವಣೆ ಬಿಸಿಬೇಳೆಬಾತ್, ಜೋಳದ ಹಿಟ್ಟಿನಿಂದ ತಯಾರಿಸಿದ ಕೇಕ್, ಈರೋಳ್ ಜ್ಯೂಸ್, ಬೇಳೆ ಪಡ್ಡು, ನವಣೆ ಬರ್ಫಿ, ರಾಗಿ ಸಿಹಿ ಕಡುಬು, ಹನಿ ಮಿಲೆಟ್, ಸಿರಿಧಾನ್ಯ ಸುಕ್ಕಿನ ಉಂಡೆ, ನವಣೆ ಕ್ಯಾಪ್ಸಿಕಂ ಕಬಾಬ್, ಸಾಮೆ ತರಕಾರಿ ಬಿರಿಯಾನಿ, ಸಿರಿಧಾನ್ಯ ವಡೆ, ರಾಗಿ ಇಡ್ಲಿ, ಬರಗುಉಪ್ಪಿಟ್ಟು, ನುಗ್ಗೆ ಸೊಪ್ಪಿನ ರೊಟ್ಟಿ, ಸಿರಿಧಾನ್ಯ ಕಿಚ್ಡಿ, ಹಾರಕ ಹಲಸಿನ ಗುಜ್ಜಿ ಬಿರಿಯಾನಿ, ಹಲಸಿನ ಹೋಳಿಗೆ, ಸಿರಿಧಾನ್ಯ ಕುಕೀಸ್, ನವಣೆ ಸಿಲ್ಕ್ ಫ್ಯೂಜನ್‌ಡೆಸರ್ಟ್, ರಾಗಿ ಹಲ್ವ, ಸಿರಿಧಾನ್ಯ ಪೊಂಗಲ್ ವಿಶಿಷ್ಟವಾಗಿ ಒಂದಕ್ಕಿಂತ ಒಂದು ವಿಭಿನ್ನ ರೀತಿಯಲ್ಲಿ ಪ್ರದರ್ಶಿಸಿದರು.

ಬಹುಮಾನ ವಿಜೇತರು :

*ಸಿರಿಧಾನ್ಯ ಖಾರ ಖಾದ್ಯಗಳ ವಿಭಾಗ: ಪ್ರಥಮ-ಜಯಶ್ರೀ ಅತ್ತಾವರ, ದ್ವಿತೀಯ- ರಾಜೇಶ್ವರಿ ಎನ್, ತೃತೀಯ - ಎಂ.ಪಿ ರೋಹಿಣಿ ಆಚಾರ್ಯ

*ಸಿರಿಧಾನ್ಯ ಸಿಹಿ ಖಾದ್ಯಗಳ ವಿಭಾಗ: ಪ್ರಥಮ -ವಿಮಲಾ ರಾಜು, ದ್ವಿತೀಯ-ವಿವೇಕ ಆಳ್ವ, ತೃತೀಯ -ಪ್ರಜ್ವಲ್ ಎಂ.

*ಮರೆತುಹೋದ ಖಾದ್ಯಗಳ ವಿಭಾಗ: ಪ್ರಥಮ -ಶಶ್ಮಿ ಭಟ್, ದ್ವಿತೀಯ -ಸ್ಮಿತಾ ವಿವೇಕ್, ತೃತೀಯ - ಸುನೀತಾ ಹರೀಶ್ *ಪಾಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಸ್ಪರ್ಧಾಳುಗಳಿಗೆ ಪ್ರಶಂಸಾ ಪತ್ರವನ್ನು ವಿತರಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News