×
Ad

ಬಿ-ಹ್ಯೂಮನ್ ಕಪ್: ಫೈಟರ್ಸ್ ಜುಬೈಲ್ ತಂಡ ಚಾಂಪಿಯನ್

Update: 2026-01-07 20:41 IST

ಅಲ್ ಜುಬೈಲ್: ಬಿ-ಹ್ಯೂಮನ್ ಕಪ್-2026 ಸೀಸನ್ 3 ಕ್ರಿಕೆಟ್ ಟೂರ್ನಿಯು ರೋಚಕವಾಗಿ ಮುಕ್ತಾಯಗೊಂಡಿದೆ. ಜ. 2ರಂದು ಅಲ್ ಫಲಾಹ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅಸೆಂಟ್ ವಿರುದ್ಧ ಫೈಟರ್ಸ್ ಜುಬೈಲ್ ಜಯ ಸಾಧಿಸಿ ಟ್ರೋಫಿಯನ್ನು ಎತ್ತಿ ಹಿಡಿಯಿತು.

ಫೈಟರ್ಸ್ ಜುಬೈಲ್ ತಂಡವು ನಿಗದಿತ 6 ಓವರ್‌ಗಳಲ್ಲಿ 85 ರನ್ ಗಳಿಸಿತು. ಗೆಲುವಿಗೆ 86 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಅಸೆಂಟ್ ತಂಡವು ಗುರಿ ತಲುಪುವಲ್ಲಿ ವಿಫಲವಾಯಿತು.

* ಪ್ರಶಸ್ತಿ: ಫೈಟರ್ಸ್ ಜುಬೈಲ್ ತಂಡದ ಅನ್ವರ್ ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಗಳನ್ನು ಪಡೆದರು.

ಮೊದಲ ಸೆಮಿಫೈನಲ್‌ನಲ್ಲಿ ಅಸೆಂಟ್ ಮತ್ತು ಕ್ಲಸ್ಟರ್ಸ್ ನಡುವೆ ನಡೆದ ಪಂದ್ಯದಲ್ಲಿ ಅಸೆಂಟ್ ಜಯಗಳಿಸಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ಫೈಟರ್ಸ್ ಜುಬೈಲ್ ಮತ್ತು ಆಂಪ್ಲಿಟ್ಯೂಡ್ ಅವೆಂಜರ್ಸ್ ನಡುವೆ ನಡೆದ ಪಂದ್ಯದಲ್ಲಿ ಫೈಟರ್ಸ್ ಜುಬೈಲ್ ಜಯಗಳಿಸಿತ್ತು.

ಈ ಮೆಗಾ ನಾಕೌಟ್ ಟೂರ್ನಿಯನ್ನು ಬಿ-ಹ್ಯೂಮನ್ ಜುಬೈಲ್ ಘಟಕ ಆಯೋಜಿಸಿದ್ದು, ಒಟ್ಟು 10 ಪ್ರಮುಖ ತಂಡಗಳು ಭಾಗವಹಿಸಿದ್ದವು. ಅಲ್ ಮುಝೈನ್ ಮತ್ತು ರಕ್ವಾನಿ ಗ್ರೂಪ್ ಮುಖ್ಯ ಪ್ರಾಯೋಜಕರಾಗಿದ್ದರು.

*ಸಮಾರೋಪ ಸಮಾರಂಭ ಸನ್ಮಾನ: ಸಮಾರೋಪ ಸಮಾರಂಭದಲ್ಲಿ ಬಿ-ಹ್ಯೂಮನ್ ಸಂಸ್ಥಾಪಕ ಆಸಿಫ್ ಡೀಲ್, ಅಧ್ಯಕ್ಷ ಶರೀಫ್ ಬೋಳಾರ್ ಮುಖ್ಯ ಅತಿಥಿಗಳಾಗಿದ್ದರು.

ಅಲ್ ಮುಜೈನ್ ಜನರಲ್ ಮ್ಯಾನೇಜರ್ ದೀಪಕ್, ಮ್ಯಾನೇಜರ್‌ಗಳಾದ ಸಿ.ಆರ್. ಅಬೂಬಕರ್, ಹಿತೇಶ್, ಯೆನೆಪೋಯ ಶಾಲೆ ಸಿಇಒ ಡಾ. ಅರುಣ್ ರೈ, ಮಖಾವಿ ಸಿಇಒ ಶಕೀಲ್, ಅರಬ್ ಎನರ್ಜಿ ಸಿಇಒ ಫಾರೂಕ್ ಅಹಮದ್ , ಪೋರ್ಟ್ ವೇ ಟ್ರಾವೆಲ್ಸ್ ಸಿಸಿಒ ಮುಹಮ್ಮದ್ ಫಾರೂಕ್ , ಶೀಲ್ಡ್ ಸೆನ್ಸರ್ ಎಂಡಿ ಮುಖ್ತಾರ್ ನೂರ್, ಬಿ-ಹ್ಯೂಮನ್ ಟ್ರಸ್ಟಿಗಳಾದ ಶಾಹುಲ್ ಹಮೀದ್ , ಯೂನಸ್, ಯುನಿಫೈಡ್ ಇನ್ಸ್‌ಪೆಕ್ಷನ್ ಕಂಪನಿ ಸಿಇಒ ಅನ್ಸಾಫ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

*ಸನ್ಮಾನ ಕಾರ್ಯಕ್ರಮ: ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸಿದ ಮುಹಮ್ಮದ್ ಮಲೆಬೆಟ್ಟು, ದಿಲಾವರ್ ಹುಸೇನ್, ಹೀನಾ ಫಿರೋಜ್ ಖಾನ್ ಇವರನ್ನು ಸನ್ಮಾನಿಸಲಾಯಿತು.

ಮಹಿಳೆಯರು ಮತ್ತು ಮಕ್ಕಳಿಗಾಗಿ ಕೌಟುಂಬಿಕ ಆಟಗಳು ಮತ್ತು ಉಚಿತ ಲಕ್ಕಿ ಡ್ರಾ ಕೂಪನ್‌ಗಳು ಕಾರ್ಯಕ್ರಮದ ವಿಶೇಷ ಆಕರ್ಷಣೆಗಳಾಗಿದ್ದವು.

ಫವಾದ್ ಉಳ್ಳಾಲ್ ಕುರಾನ್ ಪಠಿಸಿದರು. ಜುಬೈಲ್ ಘಟಕದ ಅಧ್ಯಕ್ಷ ಬಶೀರ್ ಸ್ವಾಗತಿಸಿದರು. ಸಲೀಂ ಉಡುಪಿ ಕಾರ್ಯಕ್ರಮ ನಿರೂಪಿಸಿದರು. ಬಿ-ಹ್ಯೂಮನ್ ಟ್ರಸ್ಟಿ ಯೂನಸ್ ವಂದಿಸಿದರು. 









 


 


 


 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News