×
Ad

ಮೂಡುಬಿದಿರೆ| ನಾಗಪ್ಪ ಪೂಜಾರಿಗೆ 'ಕೃಷಿ ಸಾಧಕ', ಗಂಗಯ್ಯ ಗೌಡರಿಗೆ 'ಅತ್ಯುತ್ತಮ ಕೃಷಿ ಕಾರ್ಮಿಕ' ಪುರಸ್ಕಾರ

Update: 2026-01-07 21:34 IST

ಮೂಡುಬಿದಿರೆ: ತಾಲೂಕಿನ ಇಬ್ಬರು ಸಾಧಕ ಕೃಷಿಕರು ಮೈಸೂರು ವಿಭಾಗ ಮಟ್ಟದ ಕೃಷಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ದರೆಗುಡ್ಡೆಯ ನಾಗಪ್ಪ ಪೂಜಾರಿಯವರಿಗೆ 'ಅತ್ಯುತ್ತಮ ಕೃಷಿ ಸಾಧಕ ಪುರಸ್ಕಾರ' ಹಾಗೂ ಪುತ್ತಿಗೆ ಗ್ರಾಮದ ಪಾದೆಮನೆ ನಿವಾಸಿ ಗಂಗಯ್ಯ ಗೌಡ ಅವರು 'ಅತ್ಯುತ್ತಮ ಕೃಷಿ ಕಾರ್ಮಿಕ' ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ಜಿಲ್ಲಾ ಕೃಷಿಕ ಸಮಾಜ ದಕ್ಷಿಣ ಕನ್ನಡ ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಗದ್ದೆಯಲ್ಲಿ ಜನವರಿ 10, 11 ಮತ್ತು 12ರಂದು ನಡೆಯಲಿರುವ ಮೈಸೂರು ವಿಭಾಗ ಮಟ್ಟದ 'ಕೃಷಿ ಮೇಳ ಮತ್ತು ಸಸ್ಯ ಜಾತ್ರೆ'ಯಲ್ಲಿ ಈ ಪುರಸ್ಕಾರ ವನ್ನು ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News