ಕಡಬ: ನದಿಯಲ್ಲಿ ತೇಲಿಬಂತು ಕಾಡುಕೋಣದ ಕಳೇಬರ
Update: 2023-07-01 11:07 IST
ಕಡಬ, ಜು.1. ಬೃಹತ್ ಗಾತ್ರದ ಕಾಡುಕೋಣದ ಕಳೇಬರವೊಂದು ಕಡಬ ಸಮೀಪದ ಕೋಡಿಂಬಾಳದ ಪುಳಿಕುಕ್ಕು ಎಂಬಲ್ಲಿ ಶನಿವಾರ ಕಂಡುಬಂದಿದೆ.
ಪುಳಿಕುಕ್ಕು ಸೇತುವೆಯ ಬಳಿ ನದಿಯಲ್ಲಿ ಕಾಡುಕೋಣದ ಕಳೇಬರ ತೇಲುತ್ತಿತ್ತು. ವಿದ್ಯುತ್ ಆಘಾತ ಅಥವಾ ಯಾರಾದರೂ ಗುಂಡು ಹೊಡೆದಿದ್ದರಿಂದ ಕಾಡುಕೋಣ ಸತ್ತಿರಬಹುದೆಂದು ಶಂಕಿಸಲಾಗಿದೆ. ಅರಣ್ಯ ಇಲಾಖೆಯವರು ಕಾಡುಕೋಣದ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ.