ಕಡಬ: ಮತದಾನದ ಫೋಟೋ ಹಂಚಿಕೆ; ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲು ಸಾರ್ವಜನಿಕರ ಆಗ್ರಹ
Update: 2024-04-28 12:13 IST
ಕಡಬ, ಎ.28: ತಾನು ಮತದಾನ ಮಾಡಿದ್ದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಸ್ಟೇಟಸ್ ಹಾಕಿರುವ ಘಟನೆ ಕಡಬದಲ್ಲಿ ನಡೆದಿದ್ದು, ಇದೀಗ ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹ ವ್ಯಕ್ತವಾಗಿರುವ ಬಗ್ಗೆ ವರದಿಯಾಗಿದೆ.
ಆಲಂಕಾರು ಗ್ರಾಮದ ಬೂತ್ ನಂ.59 ರಲ್ಲಿ ಸದಾನಂದ ಪೂಜಾರಿ ಎಂಬವರು ತಾನು ಮತದಾನ ಮಾಡಿದ ಫೋಟೋವನ್ನು ಫೇಸ್‌ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದು, ಆರೋಪಿಯ ವಿರುದ್ಧ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಚುನಾವಣೆಯ ದಿನ ಪುತ್ತೂರಿನಲ್ಲಿ ಇಂತಹುದೇ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಲಾಗಿತ್ತು.