×
Ad

ಕಲ್ಕಟ್ಟ:‌ ಉಚಿತ ಕಣ್ಣಿನ ತಪಾಸಣೆ ಶಿಬಿರ

Update: 2025-07-27 11:18 IST

ಉಳ್ಳಾಲ: ಶ್ರೀ ವಿಷ್ಣು ಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಟ್ರಸ್ಟ್ (ರಿ) ಮಂಜನಾಡಿ ಇದರ ಆಶ್ರಯದಲ್ಲಿ , ಯೆನೆಪೋಯ ಆಸ್ಪತ್ರೆ ಇದರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ವೈದ್ಯಕೀಯ ಚಿಕಿತ್ಸಾ ಶಿಬಿರ ಕಾರ್ಯಕ್ರಮವು ಜಿ.ಪಂ.ಸರಕಾರಿ ಪ್ರೌಢ ಶಾಲೆ ಕಲ್ಕಟ್ಟ ದಲ್ಲಿ ನಡೆಯಿತು.

ಟ್ರಸ್ಟ್ ನ ಸಾಂಸ್ಕೃತಿಕ ಕಾರ್ಯದರ್ಶಿ ಉದಯ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಯೆನೆಪೋಯ ಆಸ್ಪತ್ರೆ ಕೋ ಆರ್ಡಿನೇಟರ್ ರಝಾಕ್ ವೈದ್ಯಕೀಯ ಚಿಕಿತ್ಸೆ ಬಗ್ಗೆ ಸಲಹೆ ನೀಡಿದರು.ಟ್ರಸ್ಟ್ ಡೈರೆಕ್ಟರ್ ಜಗದೀಶ್ ಗಟ್ಟಿ ಎಸ್ ಉಚ್ಚಿಲ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು.

ಈ ಕಾರ್ಯಕ್ರಮ ದಲ್ಲಿ ಎಸ್ ಡಿಎಂಸಿ ಅಧ್ಯಕ್ಷ ಹುಸೈನ್, ಹಸೈನಾರ್ ಕೆ.ಕೆ, ಡಾ. ಅಫ್ಸಲ್ , ಡಾ. ಆಲೆಮ್ ಉಪಸ್ಥಿತರಿದ್ದರು . ಸುಜಾತಾ ಕಲ್ಕಟ್ಟ ಪ್ರಾರ್ಥನೆ ನಡೆಸಿದರು.

ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಸುಕೇಶ್ ಮಂಜನಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News