×
Ad

ಕಲ್ಲಡ್ಕ: ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಮೀಲಾದ್ ಕಾರ್ಯಕ್ರಮ

Update: 2023-09-28 12:04 IST

ಬಂಟ್ವಾಳ, ಸೆ.28: ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ವತಿಯಿಂದ ಪ್ರವಾದಿ ಮುಹಮ್ಮದ್(ಸ.) ಪೈಗಂಬರ್ ರವರ ಜನ್ಮ ದಿನಾಚರಣೆ ಪ್ರಯುಕ್ತ ಮೀಲಾದ್ ಕಾರ್ಯಕ್ರಮ ಮಸೀದಿ ವಠಾರದಲ್ಲಿ ನಡೆಯಿತು.

ಮಸೀದಿಯ ಖತೀಬ್ ಉಸ್ಮಾನ್ ದಾರಿಮಿ ಉದ್ಘಾಟಿಸಿದರು, ಎಂಜೆಎಂ ಅಧ್ಯಕ್ಷ ಅಬೂಬಕರ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು.

ಗೋಳ್ತಮಜಲು ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಜಿ.ಮುಹಮ್ಮದ್ ಹನೀಫ್, ಕೆ.ಸಿ.ರೋಡ್ ಆಯಿಷಾ ಇಬ್ರಾಹೀಂ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.

ಮದ್ರಸ ಮುಖ್ಯ ಶಿಕ್ಷಕರಾದ ಅಬ್ದುಲ್ಲತೀಫ್ ದಾರಿಮಿ ಕಲ್ಲಡ್ಕ, ಅಬ್ದುಲ್ ಹಮೀದ್ ದಾರಿಮಿ ಗೋಳ್ತಮಜಲು, ಯಹ್ಯಾ ದಾರಿಮಿ ಕೆ.ಸಿ.ರೋಡ್ ಮೀಲಾದ್ ಸಂದೇಶ ನೀಡಿದರು.

ಕಲ್ಲಡ್ಕ ಮುಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಶಾಫಿ, ಕೋಶಾಧಿಕಾರಿ ಯೂಸುಫ್ ಹಾಜಿ ಅಮರ್, ಪದಾಧಿಕಾರಿಗಳಾದ ಸಾದಿಕ್, ಕೆ.ಎನ್.ನವಾಝ್, ಸೂರಜ್ ಹುಸೈನ್, ಅಬೂಬಕರ್ ಮುರಬೈಲು, ಕಾಸಿಂ ಕಲ್ಲಡ್ಕ, ಅಬ್ಬಾಸ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮೀಲಾದ್ ಅಂಗವಾಗಿ ಮದ್ರಸ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಬಹುಮಾನ ವಿತರಣೆ, ಜಾಥಾ ನಡೆಯಿತು.

ಪ್ರಧಾನ ಕಾರ್ಯದರ್ಶಿ ಅಬೂಬಕರ್ ಸಾಹೇಬ್ ಸ್ವಾಗತಿಸಿದರು. ಹಮೀದ್ ಗೋಳ್ತಮಜಲು ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.

 

 

 

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News