×
Ad

ಕಣಚೂರು ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆ ನೂತನ ಕಟ್ಟಡಕ್ಕೆ ಸ್ಥಳಾಂತರ: ಕಾರ್ಯಾರಂಭಕ್ಕೆ ಚಾಲನೆ

Update: 2024-03-07 18:00 IST

ಕೊಣಾಜೆ: ಮಂಗಳೂರು ನಾಟೆಕಲ್ ನಲ್ಲಿರುವ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯು ನೂತನ ಕಟ್ಟಡಕ್ಕೆ ಗುರುವಾರ ಸ್ಥಳಾಂತರಗೊಂಡಿದ್ದು, ಕುಂಬಳೆಯ ಸೈಯದ್ ಆಟಕೋಯ ತಂಙಳ್ ಅವರು ಪ್ರಾರ್ಥನೆಯನ್ನು ನೆರವೇರಿಸಿ ನೂತನ ಕಟ್ಟಡದಲ್ಲಿ ಸೇವಾ ಚಟುವಟಿಕೆಯು ಕಾರ್ಯಾರಂಭಕ್ಕೆ ಚಾಲನೆ ನೀಡಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಡಾ. ಕಣಚೂರು ಮೋನು, ನಿರ್ದೇಶಕರಾದ ಅಬ್ದುಲ್ ರೆಹಮಾನ್, ಮುಖಂಡರಾದ ಎ.ಎ.ಹೈದರ್ ಪರ್ತಿಪಾಡಿ, ಡಾ.ಮೊಹಮ್ಮದ್ ಇಸ್ಮಾಯಿಲ್ ಹೆಜಮಾಡಿ, ಡಾ.ಎಂ.ವಿ.ಪ್ರಭು, ಡಾ.ರತ್ನಾಕರ್, ಡಾ.ರೋಹನ್ ಮೊನೀಸ್, ಡಾ.ಹರೀಶ್ ಶೆಟ್ಟಿ, ಸಂಸ್ಥೆಯ ಪ್ರಾಚಾರ್ಯೆ ಡಾ ವಿದ್ಯಾಪ್ರಭಾ, ವೈದ್ಯಕೀಯ ಅಧೀಕ್ಷಕ ಡಾ. ಸುರೇಶ ನೆಗಳಗುಳಿ, ಡಾ. ಕಾರ್ತಿಕ್, ಡಾ. ಜೈನುದ್ದೀನ್, ಡಾ. ಸಲೀಮಾ, ಡಾ. ಕೇಶವ ರಾಜ್ ಹಾಗು ಕಣಚೂರು ಮೆಡಿಕಲ್ ಕಾಲೇಜಿನ ಪ್ರಾಚಾರ್ಯ , ಡೀನ್ ಮತ್ತಿತರ ಮುಖ್ಯಸ್ಥರು, ವೈದ್ಯಕೀಯ ಹಾಗೂ ವೈದ್ಯಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News