ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಸೀಸನ್- 4: ಕಂದಕ್ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್
ಮಂಗಳೂರು: ದಿ ಸರೋಜಿನಿ ಪುಂಡಲೀಕ ಕರ್ಕೇರ ಬೆಂಗರೆ ಸ್ಮರಣಾರ್ಥ ಗಲ್ಲಿ ಪ್ರೀಮಿಯರ್ ಲೀಗ್ ಕಂದಕ್ ಸೀಸನ್-4 ಫೈನಲ್ ಪಂದ್ಯದಲ್ಲಿ ಕಂದಕ್ ಸೂಪರ್ ಕಿಂಗ್ಸ್ ತಂಡ ಕಂದಕ್ ವಾರಿಯರ್ಸ್ ತಂಡ ಭರ್ಜರಿ ಜಯ ಗಳಿಸುವುದರ ಮೂಲಕ ಎರಡನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿತು. ಕಂದಕ್ ವಾರಿಯರ್ಸ್ ತಂಡವು ಕಳೆದ ಸತತ ಎರಡನೇ ಬಾರಿ ರನ್ನರ್ ಅಪ್ ಪ್ರಶಸ್ತಿ ಜಯಿಸಿತು.
ಪಂದ್ಯಾಕೂಟದ ಫೈನಲ್ ಇನ್ನಿಂಗ್ಸ್ನಲ್ಲಿ ಮೂರು ಸಿಕ್ಸರ್ ಸಿಡಿಸಿದ ಫಾಝಿಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿದ ಕಂದಕ್ ಸೂಪರ್ ಕಿಂಗ್ಸ್ ನ ಆಲ್ ರೌಂಡರ್ ನಿಯಾಝ್ ಮುರ್ಷಾದ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಟೂರ್ನಿಯ ಉತ್ತಮ ದಾಂಡಿಗನಾಗಿ ನಿಯಾಜ್ ಹಾಗೂ ಝಾಹೀರ್ ಉತ್ತಮ ಬೌಲರ್ ಪ್ರಶಸ್ತಿಗೆ ಭಾಜನರಾದರು.
ಜೂನಿಯರ್ ವಿಭಾಗದಲ್ಲಿ ದ್ವಿತೀಯ ಬಾರಿ ಕಂದಕ್ ಬುಲ್ಸ್ ಚಾಂಪಿಯನ್ ಹಾಗೂ ರನ್ನರ್ ಅಪ್ ಆಗಿ ಕಂದಕ್ ವಾರಿಯರ್ಸ್, ಸೀನಿಯರ್ ವಿಭಾಗದಲ್ಲಿ ಸಿಟಿ ಸ್ಟೈಕರ್ಸ್ ರನ್ನರ್ ಅಪ್ ಆಗಿ ಕಂದಕ್ ಸಿಟಿಜನ್ ಪ್ರಶಸ್ತಿ ಮುಡಿಗೇರಿಸಿತು.
ಯಂಗ್ ಫ್ರೆಂಡ್ಸ್ ಉರ್ವ ತಂಡದ ಆಟಗಾರ ಅರ್ಶದ್ ಬಜಾಲ್ ಹಾಗೂ ರಿಲಾಯನ್ಸ್ ತಂಡದ ಆಟಗಾರ ಚೇತನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮೋಹನ್ ಬೆಂಗ್ರೆ (ಮತ್ಸ್ಯ ಉದ್ಯಮಿ), ಪೋಲಿಸ್ ಅಧಿಕಾರಿ ಫೈಜುನ್ನೀಸಾ, ರೆಡ್ ಡೊಟ್ ಮೆಡಿಕಲ್ಸ್ ಮಾಲಕ ನವಾಝ್, ಬುರ್ಖಾ ಫ್ಯಾಶನ್ ಮಾಲಕ ರಿಯಾಝ್, ನ್ಯಾಶನಲ್ ಮೆಡಿಕಲ್ಸ್ ಮಾಲಕ ಹಮೀದ್ ಉಜಿರೆ, ಸ್ಥಳೀಯ ಪಾಲಿಕೆ ಸದಸ್ಯರಾದ ಅಬ್ದುಲ್ ಲತೀಫ್, ಡೈಕಿನ್ ಫೀಶರೀಸ್ ಮಾಲಕ ಬಿ ಇದ್ದಿನ್ ಕುಂಙಿ, ಯುವ ಉದ್ಯಮಿ ಶರೀಫ್ ಕಂದಕ್ ಮತ್ತು ತಂಡದ ನಾಯಕರು ಉಪಸ್ಥಿತರಿದ್ದರು.
ಸಮದ್ ಕಾಟಿಪಳ್ಳ ಮತ್ತು ಕಬೀರ್ ಕುದ್ರೋಳಿ ಕಾರ್ಯಕ್ರಮ ನಿರೂಪಿಸಿದರು.
ಅಂಪೈರ್ ಆಗಿ ಅನಿಶ್, ಶ್ರೇಯಾಸ್, ಹರ್ಷಿಲ್ ಇವರೊಂದಿಗೆ ವೀಕ್ಷಕ ವಿವರಣೆಗಾರ ರಾಗಿ ರಫೀಕ್ ಬೆಂಗ್ರೆ, ಕಬೀರ್ ಕುದ್ರೋಳಿ, ಮಾನ್ಸೂರ್ ಕುದ್ರೋಳಿ ಮತ್ತು ಜಿಪಿಎಲ್ ನ ಸಿಬ್ಬಂದಿಯಾಗಿ ಸಹಕರಿಸಿದ ಕಮಿಟಿ ಸದಸ್ಯರನ್ನು ಗೌರವಿಸಲಾಯಿತು.