×
Ad

ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತ: ಸಲಹಾ ಸಮಿತಿ ರಚನೆಗೆ ಸರಕಾರ ಆದೇಶ

Update: 2026-01-01 19:09 IST

ಸಾಂದರ್ಭಿಕ ಚಿತ್ರ

ಮಂಗಳೂರು: ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ ನಿಯಮಿತದ ಅಧೀನದಲ್ಲಿ ರಾಜ್ಯ, ಜಿಲ್ಲಾ, ತಾಲೂಕು ಮಟ್ಟದ ಸಲಹಾ ಸಮಿತಿಗಳನ್ನು ರಚಿಸಲು ಸರಕಾರ ಗುರುವಾರ ಮಂಜೂರಾತಿ ನೀಡಿ ಆದೇಶ ನೀಡಿದೆ.

ಅಲ್ಪ ಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಎಸ್. ಎಜಾಸ್ ಪಾಷಾ ಅವರು ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ರಾಜ್ಯಾ ದ್ಯಂತ ಕ್ರಿಶ್ಚಿಯನ್ ಸಮದಾಯ ಅಭಿವೃದ್ಧಿಯ ಆನೇಕ ಯೋಜನೆಗಳು, ಕಾರ್ಯಕ್ರಮಗಳು ಹಾಗೂ ಚಟುವಟಿಕೆ ಗಳನ್ನು ಜಾರಿಗೆ ತರಲಾಗುತ್ತದೆ. ಈ ಯೋಜನೆಗಳ ರೂಪುರೇಷೆ ಸಿದ್ದಪಡಿಸುವುದು, ಫಲಾನುಭವಿಗಳ ಆಯ್ಕೆ ಹಾಗೂ ಪರಿಣಾಮಕಾರಿಯಾದ ಅನುಷ್ಠಾನಕ್ಕಾಗಿ ಸಮುದಾಯದ ಪ್ರತಿನಿಧಿಗಳ ನೇರ ಪಾಲ್ಗೊಳ್ಳುವಿಕೆ ಮತ್ತು ಮಾರ್ಗದರ್ಶನದ ಅಗತ್ಯವಿರುವುದರಿಂದ ರಾಜ್ಯ ,ಜಿಲ್ಲಾ , ಮತ್ತು ತಾಲೂಕು ಮಟ್ಟದ ಸಲಹಾ ಸಮಿತಿ ರಚನೆಯ ಬಗ್ಗೆ ಆ.21ರಂದು ನಡೆದ ಕರ್ನಾಟಕ ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ನಿಗಮದ ಸಭೆಯಲ್ಲಿ ನಿರ್ಧರಿಸಲಾ ಗಿತ್ತು. ಇದೀಗ ಸಲಹಾ ಸಮಿತಿ ರಚನೆಗೆ ಸರಕಾರ ಅನುಮತಿ ನೀಡಿದೆ.

ವಿವರ ಇಂತಿವೆ:-

*ರಾಜ್ಯ ಮಟ್ಟದ ಸಮಿತಿ: ರಾಜ್ಯ ಮಟ್ಟದ ಸಮಿತಿಗೆ ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಕ್ರಿಚ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ರಾಜ್ಯ ಮಟ್ಟದ ಸಮಿತಿ ಕಾರ್ಯದರ್ಶಿ/ ಸಂಚಾಲಕರಾಗಿರುತ್ತಾರೆ.

ಎಲ್ಲ ಕ್ಯಾಥೊಲಿಕ್, ಸಿಎಸ್‌ಐ, ಮೆಥೋಡಿಸ್ಟ್ ಬಿಷಪ್‌ಗಳು(ಕರ್ನಾಟಕ) , ಕ್ರಿಚ್ಚಿಯನ್ ಚರ್ಚ್ ಮತ್ತು ಸಂಘಟನೆಗಳ ಒಕ್ಕೂಟ(ಎಫ್‌ಸಿಸಿಒ) , ಪಾಸ್ಟಾರ್ಸ್ ಫೆಲೋಶಿಪ್ ಪ್ರತಿನಿಧಿಗಳು, ಚರ್ಚ್ ರಿಲೀಜನ್ ಇಂಡಿಯಾ( ಸಿಆರ್‌ಐ) ಅಧ್ಯಕ್ಷರು ಮತ್ತು ಸಮುದಾಯದ ಶಿಕ್ಷಣ ತಜ್ಞರು, ಉದ್ಯಮಿಗಳು, ನಿವೃತ್ತ ಸರಕಾರಿ ಅಧಿಕಾರಿಗಳು, ಕಾನೂನು ತಜ್ಞರು, ವೈದ್ಯರು, ಸೇವಾನುಭವಿಗಳು, ರಾಜಕಾರಣಿಗಳು , ಕೈಗಾರಿಕೋದ್ಯಮಿಗಳು ಹಾಗೂ ಎನ್‌ಜಿಒ ಪ್ರತಿನಿಧಿ ಗಳು (ವಿವಿಧ ಕ್ಷೇತ್ರಗಳಿಂದ 5 ಮಂದಿ ಸದಸ್ಯರನ್ನು ಆಯ್ಕೆ ಮಾಡಬಹುದು).

ಕೆಸಿಸಿಡಿಸಿಯ ದೂರದೃಷ್ಟಿ , ಧ್ಯೇಯ, ಗುರಿ, ನೀತಿಗಳು, ಯೋಜನೆಗಳ ರೂಪುರೇಷೆ, ಸಿದ್ದಪಡಿಸಲು ಸಹಕರಿಸುವು, ಚಾಲ್ತಿಯಲ್ಲಿರುವ ಯೋಜನೆಗಳ ಅನುಷ್ಠಾನ ಮಾರ್ಗಸೂಚಿಗಳನ್ನು ಪರಿಶೀಲಿಸುವುದು, ಯೋಜನೆಗಳನ್ನು ಬಲಪಡಿ ಸಲು ಹಾಗೂ ಪರಿಣಾಮಕಾರಿಯಾದ ಅಭಿವೃದ್ಧಿಗೆ ಶಿಫಾರಸುಗಳನ್ನು ನೀಡುವುದು, ರಾಜಕೀಯ ನಾಯಕರು ಮತ್ತು ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ಸಾಧಿಸುವುದು ಹಾಗೂ ಆಧ್ಮಾತಿಕ ಹಾಗೂ ನೈತಿಕ ಮಾರ್ಗದರ್ಶನ ಒದಗಿಸುವುದು ರಾಜ್ಯ ಮಟ್ಟದ ಸಮಿತಿಯ ಜವಾಬ್ದಾರಿಯಾಗಿರುತ್ತದೆ.

*ಜಿಲ್ಲಾ ಮಟ್ಟದ ಸಮಿತಿ: ಜಿಲ್ಲಾಧಿಕಾರಿ ಅಧ್ಯಕ್ಷರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಕ್ಯಾಥೊಲಿಕ್ ಸಿಎಸ್‌ಐ, ಮೆಥೋಡಿಸ್ಟ್ ಬಿಷಪ್‌ಗಳು ಅಥವಾ ಅವರ ಪ್ರತಿನಿಧಿಗಳು, ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದ ನಿರ್ದೇಶಕ ಅಥವಾ ಪ್ರತಿನಿಧಿ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಎಫ್‌ಸಿಸಿಒ ಜಿಲ್ಲಾ ಪ್ರತಿನಿಧಿಗಳು, ಪಾಸ್ಟಾರ್ಸ್ ಫೆಲೋಶಿಪ್ ಪ್ರತಿನಿಧಿಗಳು, ಸಿಆರ್‌ಐ ವಲಯಾಧ್ಯಕ್ಷರು ಅಥವಾ ಕಾರ್ಯದರ್ಶಿಗಳು , ಮತ್ತು ಸಮುದಾಯದ ಶಿಕ್ಷಣ ತಜ್ಞರು, ಉದ್ಯಮಿಗಳು, ನಿವೃತ್ತ ಆಡಳಿತ ಅಧಿಕಾರಿಗಳು, ಕಾನೂನು ತಜ್ಞರು, ವೈದ್ಯರು, ಸೇವಾನುಭವಿಗಳು, ರಾಜಕಾರಣಿಗಳು , ಕೈಗಾರಿಕೋದ್ಯಮಿಗಳು ಹಾಗೂ ಎನ್‌ಜಿಒ ಪ್ರತಿನಿಧಿಗಳು (ವಿವಿಧ ಕ್ಷೇತ್ರಗಳಿಂದ 5 ಮಂದಿ ಸದಸ್ಯರನ್ನು ಆಯ್ಕೆ ಮಾಡಲು ಅವಕಾಶ ).

*ತಾಲೂಕು ಮಟ್ಟದ ಸಮಿತಿ: ತಾಲೂಕು ತಹಶೀಲ್ದಾರ್ ಅಧ್ಯಕ್ಷರು, ಅಲ್ಪ ಸಂಖ್ಯಾತ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾ ಅಧಿಕಾರಿ ಸದಸ್ಯ ಕಾರ್ಯದರ್ಶಿ ಆಗಿರುತ್ತಾರೆ. ಸದಸ್ಯರಾಗಿ ಕ್ಯಾಥೊಲಿಕ್ ಸಿಎಸ್‌ಐ ಹಾಗೂ ಮೆಥೋಡಿಸ್ಟ್ ಬಿಷಪ್‌ಗಳ ಪ್ರತಿನಿಧಿಗಳು, ಎಫ್‌ಸಿಸಿಒ ತಾಲೂಕು ಪ್ರತಿನಿಧಿ, ಪಾಸ್ಟಾರ್ಸ್ ಫೆಲೋಶಿಪ್ ಪ್ರತಿನಿಧಿ ಗಳು, ಸಿಆರ್‌ಐ ತಾಲೂಕು ಅಧ್ಯಕ್ಷರು ಅಥವಾ ಕಾರ್ಯದರ್ಶಿಗಳು ಮತ್ತು ಸಮುದಾಯದ ಶಿಕ್ಷಣ ತಜ್ಞರು, ಉದ್ಯಮಿಗಳು, ಕಾನೂನು ತಜ್ಞರು, ವೈದ್ಯರು, ಸೇವಾನುಭವಿಗಳು, ರಾಜಕಾರಣಿಗಳು , ಕೈಗಾರಿಕೋದ್ಯಮಿಗಳು ಹಾಗೂ ಎನ್‌ಜಿಒ ಪ್ರತಿನಿಧಿಗಳು (ವಿವಿಧ ಕ್ಷೇತ್ರಗಳಿಂದ 5 ಮಂದಿ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಬಹುದು).

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News