×
Ad

ಕರ್ನಾಟಕ ಮುಸ್ಲಿಂ ಜಮಾಅತ್ ಸದಸ್ಯತ್ವ ಸಡಗರಕ್ಕೆ ಚಾಲನೆ

Update: 2025-01-01 12:35 IST

2025-26 ರ ಸಾಂಘಿಕ ಅವಧಿಯ ಕರ್ನಾಟಕ ಮುಸ್ಲಿಂ ಜಮಾಅತಿನ ಸದಸ್ಯತ್ವ ಅಭಿಯಾನಕ್ಕೆ ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರಾದ ಝೈನುಲ್ ಉಲಮಾ ಖಾಝಿ ಮಾಣಿ ಉಸ್ತಾದ್ ಚಾಲನೆ ನೀಡಿದರು.

ಬುಧವಾರ ದ.ಕ.ಈಸ್ಟ್ ಜಿಲ್ಲೆಗೊಳಪಟ್ಟ ಮಾಣಿ ಶಾಖೆಯಲ್ಲಿ ಕರ್ನಾಟಕ ಮುಸ್ಲಿಂ ಜಮಾಅತಿನ ಸದಸ್ಯರಾಗುವ ಮೂಲಕ ಅಧಿಕೃತವಾಗಿ ಸದಸ್ಯತ್ವ ಅಭಿಯಾನವನ್ನು ಉದ್ಘಾಟಿಸಿದರು.

ಜನವರಿ 1 ರಿಂದ 20 ರವರೆಗೆ 'ಸತ್ಪಥದ ಸಂಕಲ್ಪ' ಎಂಬ ಘೋಷವಾಕ್ಯದಡಿ ಈ ಅಭಿಯಾನವು ನಡೆಯಲಿದೆ. ಜನವರಿ ಮೂರರಂದು ರಾಜ್ಯಾಧ್ಯಂತ 'ಸದಸ್ಯತ್ವ ಸಂಕಲ್ಪ ದಿನ' ಆಚರಿಸಲಾಗುವುದು. ಕರ್ನಾಟಕ ಮುಸ್ಲಿಂ ಜಮಾಅತಿನ ಎಲ್ಲಾ ಕಾರ್ಯಕರ್ತರು ಈ ಸದಸ್ಯತ್ವ ಸಡಗರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೋಂದಾಯಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯಾಧ್ಯಕ್ಷ ಡಾ. ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ ಮತ್ತು ಪ್ರಧಾನ ಕಾರ್ಯದರ್ಶಿ ಅಬೂಸುಫ್‌ಯಾನ್ ಮದನಿ ವಿನಂತಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News