×
Ad

ಕಟೀಲು: ನೀರಿನ ಟ್ಯಾಂಕ್‌ ಬಳಿ ಯುವಕನ ಮೃತದೇಹ ಪತ್ತೆ

Update: 2024-10-27 19:49 IST

ಕಟೀಲು: ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಟೀಲು ಕೊಂಡೆ ಮೂಲದ ಸರಕಾರಿ ಆಸ್ಪತ್ರೆಯ ಹಿಂಭಾಗದ ನೀರಿನ ಟ್ಯಾಂಕ್‌ ಬಳಿ ವ್ಯಕ್ತಿಯೊಬ್ಬರ ಮೃತದೇಹ ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ಸ್ಥಳೀಯ ನಿವಾಸಿ ತಾರಾನಾಥ (40) ಎಂದು ಗುರುತಿಸಲಾಗಿದೆ.

ತಾರಾನಾಥ ಅವರು ಕಟೀಲು ಪರಿಸರದಲ್ಲಿ ಮೇಸ್ತ್ರಿ ಕೆಲಸ ಮಾಡುತ್ತಿದ್ದು, ರವಿವಾರ ಬೆಳಗ್ಗೆ ಕೊಂಡೆಮೂಲ ನೀರಿನ ಟ್ಯಾಂಕ್‌ ಬಳಿ ಕುತ್ತಿಗೆಯಲ್ಲಿ ಬಟ್ಟೆ ಒಣಗಿಸುವ ಕೇಬಲ್ ವಯರ್ ಪತ್ತೆಯಾಗಿದ್ದು, ಕೊಲೈಗೈದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಕೂಡಲೇ ಸ್ಥಳೀಯರು ಬಜ್ಪೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ಎಸಿಪಿ ಶ್ರೀಕಾಂತ್, ಬಜ್ಪೆ ಇನ್ಸ್ ಪೆಕ್ಟರ್ ಸಂದೀಪ್ ಅವರನ್ನೊಳಗೊಂಡ ಪೊಲೀಸರ ತಂಡ, ಫೋರೆನ್ಸಿಕ್, ಬೆರಳಚ್ಚು, ಶ್ವಾನ ದಳ ತನಿಖಾ ತಂಡಗಳು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿವೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News