ಕಾಪು: ಹಮ್ದ್ ಫುಡ್ಸ್ ನ 4ನೇ ಮಳಿಗೆ ಶುಭಾರಂಭ
ಕಾಪು: ಹಮ್ದ್ ಮಸಾಲಾ ಉತ್ಪನ್ನಗಳ ಉತ್ಪಾದಕರು ಹಾಗೂ ಹೋಲ್ ಸೇಲ್ ಮತ್ತು ರಿಟೇಲ್ ಮಾರಾಟಗಾರರಾಗಿರುವ 'ಹಮ್ದ್ ಫುಡ್ಸ್' ಇದರ 4ನೇ ಮಳಿಗೆ ಕಾಪು ನಗರದಲ್ಲಿ ಗುರುವಾರ ಶುಭಾರಂಭಗೊಂಡಿತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಹಮ್ದ್ ಸಂಸ್ಥಾಪಕಿ ಶಾಹಿದಾ ಎ. ಮಾತನಾಡಿ, “ಇಂದಿನ ಬ್ಯುಸಿ ದಿನಚರಿಯಲ್ಲಿ ಬಹುಮಂದಿಗೆ ಆರೋಗ್ಯಕರ ಆಹಾರ ತಯಾರಿಸಲು ಸಮಯವಿಲ್ಲ. ಹೀಗಾಗಿ ಎಲ್ಲರಿಗೂ ಸಹಜವಾಗಿ ಬಳಸಬಹುದಾದ ಆರೋಗ್ಯಕರ, ತ್ವರಿತ ಉತ್ಪನ್ನಗಳನ್ನು ತಲುಪಿಸುವ ಬದ್ಧತೆಯೊಂದಿಗೆ ಈ ಮಳಿಗೆ ಪ್ರಾರಂಭಿಸಿದ್ದೇವೆ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೋಟೆ ಗ್ರಾಪಂ ಅಧ್ಯಕ್ಷೆ ಪ್ರಮೀಲಾ ಜತ್ತನ್ನ, ಕಾಪು ಕ್ರೆಸೆಂಟ್ ಇಂಟರ್ ನ್ಯಾಶನಲ್ ಸ್ಕೂಲ್ ನ ಅರಬಿಕ್ ವಿಭಾಗದ ಎಚ್.ಒ.ಡಿ. ನಿಲೋಫರ್ ಪರ್ವೀನ್, ಥೀಮ್ಸ್ ಡಿಸೈನರ್ ಬ್ಯುಟಿಕ್ ನ ರೇಷ್ಮಾ ಥೋಟಾ, ಆಲಿಯಾ ಸಯ್ಯದ್ ಮೊದಲಾದವರು ಭಾಗವಹಿಸಿ ಶುಭ ಹಾರೈಸಿದರು.
ಸಂಸ್ಥೆಯ ಸಹ ಸಂಸ್ಥಾಪಕಿ ಮರಿಯಮ್ ಶಹೀರ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ವಾಹಕಿ ಖೈರುನ್ನೀಸ ಸ್ವಾಗತಿಸಿ, ವಂದಿಸಿದರು.
ನೈಸರ್ಗಿಕ ಆಹಾರ ಉತ್ಪನ್ನ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಮ್ದ್ ಫುಡ್ಸ್ ಕಂಪೆನಿಯು ಫಳ್ನೀರ್, ಕೃಷ್ಣಾಪುರ ಮತ್ತು ತೊಕ್ಕೊಟ್ಟಿನಲ್ಲಿ ಮಳಿಗೆಗಳನ್ನು ಹೊಂದಿದೆ.
150ಕ್ಕೂ ಹೆಚ್ಚು ನೈಸರ್ಗಿಕ ಆಹಾರ ಹಾಗೂ ವೈಯಕ್ತಿಕ ಉಪಯೋಗದ ಉತ್ಪನ್ನಗಳು ಇಲ್ಲಿ ಲಭ್ಯವಿವೆ. ಮಸಾಲಾ ಮಿಶ್ರಣ, ಫ್ರೋಝನ್ ಆಹಾರ, ಸೌಂದರ್ಯ ತೈಲಗಳು ಮುಂತಾದವುಗಳನ್ನು ಗ್ರಾಹಕರು ಖರೀದಿಸಬಹುದು. ಇವು ಕೃತಕ ಬಣ್ಣ, ಪ್ರಿಸರ್ವೇಟಿವ್ಗಳಿಂದ ಮುಕ್ತವಾಗಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.